Breaking Newsಮುಖ್ಯಮಂತ್ರಿ ನ್ಯೂಸ್

ಕೆಡಿಪಿ, ಆಶ್ರಯ ಸಮಿತಿಗೆ ಯತೀಂದ್ರ ನೇಮಕ: ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವರುಣಾ ಕ್ಷೇತ್ರದ ಮಾಜಿ ಶಾಸಕ ಡಾ. ಯತೀಂದ್ರ ಅವರನ್ನು ರಾಜ್ಯ ಸರ್ಕಾರವು ಕೆಡಿಪಿ ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ಬಿಜೆಪಿ ಆಕ್ರೋಶವ್ಯಕ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯ ಅವರ ಪುತ್ರ ವ್ಯಾಮೋಹ, ಧೃತರಾಷ್ಟ್ರನನ್ನೇ ಮೀರಿಸುವಂತಿದೆ‌. ಸರ್ಕಾರದ ಆಡಳಿತದಲ್ಲಿ ಹಾಗೂ ವರ್ಗಾವಣೆ ದಂಧೆಯಲ್ಲಿ ಇನ್ನಿಲ್ಲದಂತೆ ಹಸ್ತಕ್ಷೇಪ ಮಾಡುವ ಆರೋಪ ಹೊತ್ತಿರುವ ಶ್ಯಾಡೋ ಸಿಎಂ ಯತೀಂದ್ರ ರವರಿಗೆ ಈಗ ಸಾಂವಿಧಾನಿಕ ಹುದ್ದೆಯನ್ನು ದಯಪಾಲಿಸಲಾಗಿದೆ, ಅದು ಗುಟ್ಟಾಗಿ!

ತಮ್ಮದು ಪಾರದರ್ಶಕ ಸರ್ಕಾರ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯರವರು, ತಮ್ಮ ಪುತ್ರನಿಗೆ ನೀಡಿದ ಹುದ್ದೆಯ ನೇಮಕಾತಿ ಆದೇಶವನ್ನು ಇಷ್ಟು ದಿನ ಗುಟ್ಟಾಗಿರಿಸಿದ್ದರು ಎಂದು ವ್ಯಂಗ್ಯವಾಡಿದೆ .

ಸಾಂವಿಧಾನಿಕ ಹುದ್ದೆ ನೀಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯತೀಂದ್ರ ಅವರು, ಸಾಂವಿಧಾನಿಕ ಹುದ್ದೆ ಇಲ್ಲದೆ ನಾನು ಕ್ಷೇತ್ರದಲ್ಲಿ ಅಧಿಕೃತವಾಗಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಮೇಲೆ ನಾನು ಕ್ಷೇತ್ರದಲ್ಲಿ ಎಲ್ಲಾ ಕಡೆ ಓಡಾಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾಗಿದೆ. ನಮ್ಮದೇ ಸರ್ಕಾರವಿದೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ಜನ ಗೆಲ್ಲಿಸಿದ್ದಾರೆ. ಬಿಜೆಪಿಯವರ ಹಿಂದಿನ ಆಡಳಿತ ನೋಡಿ ರೋಸಿ ಹೋಗಿದ್ದರು. ಅವರ ಭ್ರಷ್ಟಾಚಾರ, ದುರಾಡಳಿತದಿಂದ ಬೇಸರಗೊಂಡು ಕಾಂಗ್ರೆಸ್‌ಗೆ ಅವಕಾಶ ನೀಡಿದ್ದಾರೆ. ನಾವು ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ನಾವು ತಂತ್ರಗಾರಿಕೆ ಮಾಡಬೇಕು ಎಂದು ಹೇಳಿದರು.

ಯಾವ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ. ಅವರಿಗೆ ಟಿಕೆಟ್‌ ನೀಡುತ್ತಾರೆ. ಇದನ್ನು ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ನನ್ನ ಬೇಡಿಕೆ ಇಲ್ಲ, ಪಕ್ಷ ಏನು ಹೇಳುತ್ತಾರೆ ಅದನ್ನು ಕೇಳಬೇಕು.

Leave a Reply

Your email address will not be published. Required fields are marked *

Back to top button