Breaking Newsಸಚಿವರ ಕಚೇರಿಯಿಂದ

ಜಿಲ್ಲಾಸ್ಪತ್ರೆಗೆ ಸಚಿವ ಸಂತೋಷ್‌ ಲಾಡ್‌ ದಿಢೀರ್‌ ಭೇಟಿ | ವೈದ್ಯಾಧಿಕಾರಿಗಳ ತರಾಟೆ | ಅಮಾನತಿಗೆ ಸೂಚನೆ

ಧಾರವಾಡ : ಇಲ್ಲಿನ ಜಿಲ್ಲಾಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಲಾಗುತ್ತಿಲ್ಲ ಹಲವು ರೋಗಿಗಳು ದೂರು ನೀಡಿದರು. ಈ ಸಂಬಂಧ ಪರಿಶೀಲನೆ ನಡೆಸಿದ ಸಚಿವರು, ಯಾವ ವಿಭಾಗದಲ್ಲಿ ಎಷ್ಟು ರೋಗಿಗಳು ಇದ್ದಾರೆ ಎಂಬ ಸಾಮಾನ್ಯ ಮಾಹಿತಿ ತಿಳಿಯದೇ ಇದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಸಚಿವರ ಪ್ರಶ್ನೆಗೆ ಉತ್ತರಿಸಲಾಗದೆ ವೈದ್ಯರು ತಡಬಡಾಯಿಸಿದರು.

ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಯಲ್ಲಿ ಯಾವುದೇ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮುಂದೆ ಇಂತಹ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆಯನ್ನೂ ನೀಡಿದರು.

ಸ್ಥಳದಲ್ಲಿರದ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಸಚಿವರು, ಈ ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ. ಹೇಗೆ ಕೆಲಸ ಮಾಡಬೇಕು ಎಂಬ ಸಾಮಾನ್ಯ ಅರಿವು ಇಲ್ಲಿರುವ ವೈದ್ಯರಿಗೆ ಇಲ್ಲ. ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಿ. ಇವರನ್ನು ಅಮಾನತು ಮಾಡಿ ಎಂದು ಸೂಚಿಸಿದರು.

ಸರಿಯಾಗಿ ಕೆಲಸ ಮಾಡದ ವೈದ್ಯರನ್ನು ವಿಚಾರಿಸಿದ ಲಾಡ್‌ ಅವರು, ರೋಗಗಳ ಸರಿಯಾದ ಮಾಹಿತಿ ಇಲ್ಲದ ವೈದ್ಯರನ್ನು ಕಂಡು ಆಕ್ರೋಶಗೊಂಡರು.

ಆಸ್ಪತ್ರೆಯ ಸುಧಾರಣೆಗೂ ಅಗತ್ಯ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

Back to top button