Breaking Newsಸುದ್ದಿ ಸಮಾಚಾರ

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ: ಪ್ರಕಾಶ್‌ ರೈ ಹೇಳಿಕೆ ವಿರುದ್ಧ ಮುಗಿಬಿದ್ದ ಬಿಜೆಪಿ ಮುಖಂಡರು

ಬೆಂಗಳೂರು: ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದು ಹೇಳಿರುವ ನಟ ಪ್ರಕಾಶ್‌ ರೈ ವಿರುದ್ಧ ಬಿಜೆಪಿ ಮುಖಂಡರು ಮುಗಿಬಿದ್ದಿದ್ದಾರೆ.

ಮಾಜಿ ಸಚಿವ ಈಶ್ವರಪ್ಪ ಖಂಡನೆ
ನಮ್ಮಪ್ಪ ಯಾರು ಅಂತ ಅವರಮ್ಮನ ಬಳಿ ಕೇಳಿದ್ದಾನೋ ಇಲ್ಲೋ ಗೊತ್ತಿಲ್ಲ. ಕೆಲವರು ಇಂಥವರನ್ನ ನೇರವಾಗಿ ಹುಚ್ಚರು ಅಂದ್ರು ಅವರಿಗೆ ಬೇಜಾರಿಲ್ಲ. ಇವರು ಅಯೋಗ್ಯರು ಅಂತಾ ಹೇಳಿದ್ರೂ ಅವರಿಗೆ ಬೇಜಾರಿಲ್ಲ. ಹಾಗಾಗಿ ಅವರ ಬಗ್ಗೆ ಹೆಚ್ಚಾಗಿ ಮಾತನಾಡೋದು ಬೇಡ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಕಿಡಿ ಕಾರಿದ್ದಾರೆ.

ಹುಚ್ಚುತನದ ಪರಮಾವಧಿ
ಪ್ರಕಾಶ್ ರಾಜ್ ಗೆ ನಾಟಕ ಮಾಡಿ ಅಭ್ಯಾಸ. ಬಾಲಿಶ ಮಾತು ಪ್ರಕಾಶ್ ರಾಜ್ ಗೆ ಗೌರವ ತರಲ್ಲ. ಹುಚ್ಚ ಕೂಡಾ ಇವರಿಗಿಂತ ಚೆನ್ನಾಗಿ ಮಾತಾಡ್ತಾನೆ. ಪ್ರಕಾಶ್ ರಾಜ್ ರದ್ದು ಹುಚ್ಚುತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಹೇಳಿದ್ಧಾರೆ.

ಎಲ್ಲರೂ ಅಪ್ಪ- ಅಮ್ಮನಿಗೆ ಹುಟ್ಟೋದು. ಬೇರೆಯವರಿಗೆ ಹುಟ್ಟಲ್ಲ ಎಂದು ಮಾಜಿ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button