Breaking NewsOthersಕರ್ನಾಟಕ ರಾಜಕೀಯಜನ-ಪ್ರತಿನಿಧಿನಮ್ಮ ಶಾಸಕರುಮಾಧ್ಯಮ ಕರ್ನಾಟಕಶಾಸಕ ವಾರ್ತೆಸುದ್ದಿ ಸಮಾಚಾರ

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಸ್ಥಾನದ ಚುನಾವಣೆ, ಇಂದು ಕಾಂಗ್ರೆಸಿನ ರುದ್ರಪ್ಪ ಲಮಾಣಿ ನಾಮಪತ್ರ ಸಲ್ಲಿಕೆ

ಬೆಂಗಳೂರು: ಸ್ಪೀಕರ್ ಆಗಿ ಯು.ಟಿ. ಖಾದರ್ ಅವಿರೋಧ ಆಯ್ಕೆಯಾಗಿದ್ದು, ಡೆಪ್ಯುಟಿ ಸ್ಪೀಕರ್ ಸ್ಥಾನ ಹಾಗೆಯೇ ಉಳಿದಿತ್ತು. ಇದೀಗ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸಿನಿಂದ ಶಾಸಕ ರುದ್ರಪ್ಪ ಲಮಾಣಿ ಅವರು ಬುಧವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ರುದ್ರಪ್ಪ ಲಮಾಣಿ ಅವರು, ಚರ್ಚೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಅವರು ರುದ್ರಪ್ಪ ಲಮಾಣಿ ಅವರಿಗೆ ಶುಭಹಾರೈಸಿದ್ದಾರೆ ಎಂದು ಹೇಳಲಾಗಿದೆ.

ವಿಧಾನಸಭೆಯ ಉಪಾಧ್ಯಕ್ಷ ಅಥವಾ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ ಮತದಾನ ನಡೆಯಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

Back to top button