Breaking NewsOthersಕರ್ನಾಟಕ ರಾಜಕೀಯಸುದ್ದಿ ಸಮಾಚಾರ

ಬಿ.ಎಲ್. ಸಂತೋಷ್ ಭೇಟಿಯಾದ ಪುತ್ತಿಲ | ರಹಸ್ಯ ಮಾತುಕತೆಯ ವಿವರ ಇಲ್ಲಿದೆ ನೋಡಿ

ಪುತ್ತೂರು: ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ರಹಸ್ಯ ಭೇಟಿಯಾಗಿದ್ದಾರೆ.
ಸುಮಾರು 2 ಗಂಟೆಗೂ ಅಧಿಕ ಕಾಲ ಸಭೆ ನಡೆದಿದ್ದು, ಪುತ್ತೂರು ಬಿಜೆಪಿಯ ಬಗ್ಗೆ ಪುತ್ತಿಲ ಅವರಿಂದ ಬಿ.ಎಲ್. ಸಂತೋಷ್ ಮಾಹಿತಿ ಪಡೆದುಕೊಂಡರು. ಪುತ್ತೂರು ಬಿಜೆಪಿಯ ಭದ್ರಕೋಟೆ ಮತ್ತು ಸಂಘದ ನೆಲೆಯಲ್ಲೂ ಶಕ್ತಿ ಕೇಂದ್ರ ಆಗಿರುವ ಕಾರಣದಿಂದ ಪುತ್ತೂರಿನಲ್ಲಿ ಕಾರ್ಯಕರ್ತರನ್ನು ಒಂದುಗೂಡಿಸುವ ಬಗ್ಗೆ ಪುತ್ತಿಲ ಅವರ ಜೊತೆ ಬಿ.ಎಲ್. ಸಂತೋಷ್ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ವಿರುದ್ಧವಾದ ಭಾಷಣವನ್ನು ಮಾಡದೇ, ಹಿಂದುತ್ವದ ಮೂಲಮಂತ್ರ ಜಪಿಸಿ. ಮಾಧ್ಯಮಗಳಲ್ಲಿ ಹೇಳಿಕೆ ನೀಡುವಾಗಲೂ ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿರುವ ಬಿ.ಎಲ್. ಸಂತೊಷ್, ಬಿಜೆಪಿಯ ಸದಸ್ಯತ್ವ ಪಡೆದು ಬಿಜೆಪಿಯಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸಿ. ಹಳೆಯದನ್ನು ಮರೆತು ಪಕ್ಷ ಕಟ್ಟಲು ಸಹಕಾರ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಬಗ್ಗೆ ಮಾಹಿತಿ ಪಡೆದುಕೊಂಡ ಬಿ.ಎಲ್. ಸಂತೋಷ್ ಅವರು, ಚುನಾವಣಾ ಪೂರ್ವದಲ್ಲಿ ಪುತ್ತೂರು ಬಿಜೆಪಿಯಲ್ಲಾದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಬಿ.ಎಲ್ ಸಂತೋಷ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಜೊತೆ ಭಾಸ್ಕರ್ ಆಚಾರ್ಯ ಹಿಂದಾರು, ವೈದ್ಯ ಹಾಗೂ ಪುತ್ತಿಲ ಪರಿವಾರದ ಡಾ. ಸುರೇಶ್ ಪುತ್ತೂರಾಯ, ಉದ್ಯಮಿ ಗಣೇಶ್, ರಾಜರಾಮ್ ಬಿ.ಎಲ್ ಇದ್ದರು.

Leave a Reply

Your email address will not be published. Required fields are marked *

Back to top button