Breaking Newsಸುದ್ದಿ ಸಮಾಚಾರ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ |ಪುತ್ತಿಲ ಪರಿವಾರದಿಂದ ಪುತ್ತೂರಿನಲ್ಲಿ ‌ಬೃಹತ್ ಪ್ರತಿಭಟನೆ

ಪುತ್ತೂರು: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂಬ ಹಿನ್ನೆಲೆಯಲ್ಲಿ ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಅವರ ಹೆಸರಿನಲ್ಲಿ ಹುಟ್ಟಿಕೊಂಡ ಪುತ್ತಿಲ ಪರಿವಾರದ ನೇತೃತ್ವದಲ್ಲಿ ಇಂದು ಜಾಥಾ, ರಸ್ತೆ ತಡೆ ಮಾಡಿ, ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.


ಹಿಂದೂ ಪರವಾದ ಹಲವು ಹೋರಾಟಗಳನ್ನು ಹಮ್ಮಿಕೊಂಡು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ ಸೈ ಎನಿಸಿಕೊಂಡಿರುವುದು ಪುತ್ತಿಲ ಬಳಗದ ಹೆಚ್ಚುಗಾರಿಕೆ. ಚುನಾವಣೆ ಬಳಿಕ ಪುತ್ತಿಲ ಪರಿವಾರ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಅದರ ಮೂಲಕ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಪುತ್ತೂರಿನಲ್ಲಿ ಇಂದು ಪುತ್ತಿಲ ಪರಿವಾರದ ವತಿಯಿಂದ ಪಾದಯಾತ್ರೆ ಹಾಗೂ ರಸ್ತೆ ತಡೆ ಆಯೋಜಿಸಲಾಗಿದೆ.

ಅರುಣ್ ಕುಮಾರ್ ಪುತ್ತಿಲ

ಈ ಹೋರಾಟಕ್ಕೆ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಪುತ್ತಿಲ ಪರಿವಾರದ ವತಿಯಿಂದ ಆಹ್ವಾನಿಸಲಾಗಿದೆ. ಮೊನ್ನೆ ಸೌಜನ್ಯಾ ಸಮಾಧಿ ಬಳಿ ಪ್ರಾರ್ಥನೆ ಸಲ್ಲಿಸಿ, ಸೌಜನ್ಯಾ ತಾಯಿಗೆ ಮೊದಲ ಆಮಂತ್ರಣ ನೀಡಲಾಗಿತ್ತು.
ತಾಯಿ ಕುಸುಮಾವತಿ ಅವರ ಬಳಿ ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

2013ರಲ್ಲೂ ಅರುಣ್ ಕುಮಾರ್ ಪುತ್ತಿಲರು ಈ ಪ್ರಕರಣದ ವಿರುದ್ಧ ಹೋರಾಟ ನಡೆಸಿದ್ದರು. ಈಗ ಮರುತನಿಖೆಗೆ ಆಗ್ರಹಿಸಿ ಪುತ್ತೂರಿನಲ್ಲಿ ಪುತ್ತಿಲ‌ ಪರಿವಾರದ ಮುಂದಾಳತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಮನೀಶ್, ಶನ್ಮಿತ್ ರೈ, ಶರತ್ ಎನ್.ಎಸ್. ವಿಟ್ಲರ ಜೊತೆಗೆ ಹಿಂದು ಮುಖಂಡರು ಹಾಗು ಕಾರ್ಯಕರ್ತರ ದಂಡೇ ಭಾಗವಹಿಸಿದೆ.
ಪುತ್ತೂರಿನ ಅಂಗಡಿ ಮಾಲೀಕರರಿಗೆ 1 ಗಂಟೆ ಸ್ವಯಂಪ್ರೇರಿತ ಬಂದ್ ನಡೆಸಿ ಸೌಜನ್ಯಾ ಪ್ರಕರಣದ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗವಹಿಸುವಂತೆ ಕೇಳಿಕೊಳ್ಳಲಾಗಿದೆ.

ದ‌.ಕ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೆಚ್ಚಾಗ್ತಿರೋ ಸೌಜನ್ಯ ಪರ ಹೋರಾಟ

ಅಗಸ್ಟ್ 27ಕ್ಕೆ ಬೆಳ್ತಂಗಡಿಯಲ್ಲಿ ಬಿಜೆಪಿಯಿಂದಲೂ ಸಹ ಸೌಜನ್ಯ ಪರ ಬೃಹತ್ ಧರಣಿ ನಡೆಯಲಿದೆ. ಬಿಜೆಪಿಗೂ ಮೊದಲೇ ಸೌಜನ್ಯ ಪರ ಹೋರಾಟಕ್ಕೆ ಇಳಿದಿರುವ ಪುತ್ತಿಲ ಪರಿವಾರ ಬೃಹತ್ ಕಾಲ್ನಡಿಗೆ ಜಾಥ ನಡೆಸುತ್ತಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಪುತ್ತೂರು ಬಂದ್ ಗೂ ಕರೆ ನೀಡಲಾಗಿದೆ. ದರ್ಬೆ ವೃತ್ತದಿಂದ ಆರಂಭವಾದ ಬೃಹತ್ ಪಾದಯಾತ್ರೆ ಬಳಿಕ ಪುತ್ತೂರು ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆಯಲಿದೆ.

Leave a Reply

Your email address will not be published. Required fields are marked *

Back to top button