Breaking Newsಕರ್ನಾಟಕ ರಾಜಕೀಯ

ಕೃಷಿ ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ಬಿಜೆಪಿಯಿಂದ ಪೇಸಿಎಸ್‌ ಅಭಿಯಾನ

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಸದ್ದು ಮಾಡಿದ್ದ ಕಾಂಗ್ರೆಸ್‌ನ ಪೇಸಿಎಂ ಅಭಿಯಾನದ ರೀತಿಯಲ್ಲೇ ಇದೀಗ ಕೃಷಿ ಸಚಿವ ಎನ್‌ ಚೆಲುವರಾಯ ಸ್ವಾಮಿ ವಿರುದ್ಧ ಬಿಜೆಪಿ ಪೇಸಿಎಸ್‌ ಅಭಿಯಾನ ಆರಂಭಿಸಿದೆ.

ಚೆಲುವರಾಯಸ್ವಾಮಿ ಅವರ ವಿರುದ್ಧ ಲಂಚದ ಆರೋಪ ಇತ್ತೀಚೆಗೆ ಸದ್ದು ಮಾಡುತ್ತಿದೆ. ಇದೀಗ ಚಲುವರಾಯಸ್ವಾಮಿ ಅವರ ಫೋಟೊ ಹಾಕಿರುವ ಪೇಸಿಎಸ್‌ ಅಭಿಯಾನ ಕಾಂಗ್ರೆಸ್‌ ಇರುಸುಮುರಿಸು ತಂದಿದೆ.

ಮಂಡ್ಯದಲ್ಲಿ ಪೇ ಸಿಎಸ್‌ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು. ಅವುಗಳನ್ನು ಪೊಲೀಸರು ಕಿತ್ತು ಹಾಕಿದ್ದಾರೆ.

ಬಿಜೆಪಿ ಕರ್ನಾಟಕ ಸಪೋರ್ಟರ್ಸ್ ಗ್ರೂಪ್ ನಿಂದ ಇಂತಹ ಪೋಸ್ಟ್​ ಆಗಿದ್ದು, ನಮ್ಮಲ್ಲಿ ಪೇಟಿಎಂ ಕೂಡ ಲಭ್ಯವಿದೆ. ಧಾರಾಳವಾಗಿ ಸ್ಕ್ಯಾನ್ ಮಾಡಿ ಲಂಚ ಪಾವತಿ ಮಾಡಿ. ಧನ್ಯವಾದಗಳು, ಇಂತಿ ನಿಮ್ಮ ಭ್ರಷ್ಟ ಚೆಲುವರಾಯಸ್ವಾಮಿ ಅಲಿಯಾಸ್ ಲಂಚ ಸ್ವಾಮಿ ಎಂದು ಟ್ಯಾಗ್ ಲೈನ್ ಸಹ ಹಾಕಲಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಕಾಣಿಸಿಕೊಂಡ ಪೇ ಸಿಎಂ ಪೋಸ್ಟರ್‌ಗಳು ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು.

ಸಿಐಡಿ ತನಿಖೆ ಚುರುಕು: ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಆರೋಪದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಕೃಷಿ ಇಲಾಖೆಯ ಇಬ್ಬರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ಸತತ ನಾಲ್ಕು ಗಂಟೆ ವಿಚಾರಣೆಗೊಳಪಡಿಸಿದ್ಧಾರೆ. ಅವರ ಫೋನ್‌ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇನ್ನೂ ಇಬ್ಬರ ಪಾತ್ರದ ಬಗ್ಗೆ ತನಿಖೆ ಚುರುಕುಗೊಂಡಿದೆ.

ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕರನ್ನು ಸಿಐಡಿ ವಿಚಾರಣೆಗೊಳಪಡಿಸಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

Back to top button