Breaking Newsಕರ್ನಾಟಕ ರಾಜಕೀಯ

ಆಪರೇಷನ್‌ ಹಸ್ತಕ್ಕೆ ಪ್ರತಿಯಾಗಿ ಆಪರೇಷನ್‌ ಕಮಲ!!??: ಬಿಜೆಪಿ ತೊರೆದವರನ್ನು ಮತ್ತೆ ಪಕ್ಷಕ್ಕೆ ಕರೆತರಲು ನಡೆದಿದೆ ತೆರೆಮರೆಯ ಪ್ರಯತ್ನ

ಚಿಕ್ಕಮಗಳೂರು: ಘರ್‌ವಾಪ್ಸಿ ಹಾಗೂ ಆಪರೇಷ್‌ ಹಸ್ತದ ನಡುವೆ ಈಗ ಬಿಜೆಪಿ ತೊರೆದವರ ಪಕ್ಷ ಸೇರ್ಪಡೆಗೆ ತೆರೆ ಮರೆಯ ಯತ್ನಗಳೂ ನಡೆಯುತ್ತಿವೆ. ಇದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನಿನ್ನೆ ನೀಡಿರುವ ಹೇಳಿಕೆಗಳು ಪುಷ್ಟಿ ನೀಡಿವೆ.

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ನರೇಂದ್ರ ಮೋದಿ ಅವರನ್ನ ಪ್ರಧಾನಿ ಮಾಡಲು ಬಿಜೆಪಿಗೆ ಬರುವವರಿಗೆ ಸ್ವಾಗತ. ಮೋದಿಯವರಂತ ನಾಯಕ ದೇಶಕ್ಕೆ ಮತ್ತೆ ಸಿಗುವುದಿಲ್ಲ. ನಮ್ಮ ದೇಶದ ನಾಯಕನ್ನು ಇಂದು ವಿಶ್ವವೇ ಒಪ್ಪಿಕೊಂಡಿದೆ. ಯಾರೇ ಪಾರ್ಟಿ ಬಿಟ್ಟಿದ್ದರೂ ವಾಪಸ್ ಬರಲು ವಿನಂತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರಿನಲ್ಲಿ ಶನಿವಾರ ಹೇಳಿದ್ದರು.

ಕರಂದ್ಲಾಜೆ ಅವರ ಈ ಹೇಳಿಕೆ ಪರೋಕ್ಷವಾಗಿ ಶೆಟ್ಟರ್‌ ಮತ್ತು ಸವದಿ ಅವರನ್ನು ಕುರಿತಾಗಿಯೇ ಇದೆ ಎನ್ನಲಾಗುತ್ತಿದೆ.

ಭಾರತೀಯ ಜನತಾ ಪಕ್ಷ ಸೇರ್ಪಡೆಯಾದವರಿಗೆ ದೊಡ್ಡದೊಡ್ಡ ಹುದ್ದೆ ನೀಡಿದೆ. ಜವಾಬ್ದಾರಿ ನೀಡಿದೆ. ಗೌರವದಿಂದ ನಡೆಸಿಕೊಂಡಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ನಾವು ಶ್ರವವಹಿಸಬೇಕು. ಚುನಾವಣೆ ಹತ್ತಿರ ಬರುತ್ತಿದೆ. ದೇಶಕ್ಕೆ ಮೋದಿ ಬೇಕಾಗಿದೆ. ವಿಶ್ವಕ್ಕೆ ಮೋದಿ ಬೇಕಾಗಿದೆ. ಭಾರತವನ್ನು ಇನ್ನಷ್ಟು ಗಟ್ಟಿ ಮಾಡಲು ಮೋದಿ ಅವರು ಬೇಕಾಗಿದೆ.ಪಕ್ಷ ಬಿಟ್ಟವರನ್ನು ಮತ್ತೆ ಸೇರಿಸಿಕೊಳ್ಳಲು ಪ್ರಯತ್ನ ಸಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ. ನಿಮ್ಮ ವಿಶ್ವಾಸ ಇದೆ ಎಂದು ನಂಬಿದ್ದೇನೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

Back to top button