Breaking Newsಸಚಿವರ ಕಚೇರಿಯಿಂದ

ಶೀಘ್ರ ರಸ್ತೆಗೆ ಹೊಸ ಸರ್ಕಾರಿ ಬಸ್ | ಮುರಿದು ಹೋದ ಬಸ್ ಡೋರ್ ಹಿನ್ನೆಲೆಯಲ್ಲಿ ಸಾರಿಗೆ ಸಚಿವರ ಪ್ರತಿಕ್ರಿಯೆ

ಬೆಂಗಳೂರು: ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್’ಗಳು ತುಂಬಿ ತುಳುಕುತ್ತಿದ್ದು, ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶೀಘ್ರವೇ ಹೊಸ ಬಸ್ ಗಳನ್ನು ರಸ್ತೆಗೆ ಇಳಿಸಲಾಗುವುದು ಎಂದಿದ್ದಾರೆ.

ಸಾರಿಗೆ ಬಸ್’ಗಳ ವ್ಯವಸ್ಥೆಯನ್ನು ಹಿಂದಿನ ಬಿಜೆಪಿ ಸರ್ಕಾರವೇ ಸರಿ ಮಾಡಬೇಕಿತ್ತು. ಆದರೆ ಮಾಡಿಲ್ಲ. ಆ ಕೆಲಸವನ್ನು ನಾವು ಮಾಡುತ್ತೇವೆ. ಹದಗೆಟ್ಟ ಬಸ್ ಗಳನ್ನು ಪರಿಶೀಲಿಸಿ, ಹೊಸ ಬಸ್ ಗಳನ್ನು ಬಿಡುತ್ತೇವೆ ಎಂದಿದ್ದಾರೆ.
ಬಸ್ ಗಳನ್ನು ಕಾಲ ಕಾಲಕ್ಕೆ ಬದಲಾಯಿಸಬೇಕು. ಆದರೆ ಮೆಕ್ಯಾನಿಕ್ ಕೊರತೆಯಿಂದ ಬಸ್ ಗಳ ಪರಿಸ್ಥಿತಿಯನ್ನು ಗಮನಿಸಲು ಆಗಿಲ್ಲ. ಆದ್ದರಿಂದ ಹೊಸ ನೇಮಕಾತಿಯನ್ನು ಮಾಡಲಾಗುವುದು ಎಂದರು.
ವಾರಾಂತ್ಯದಲ್ಲಿ ಪುಣ್ಯಕ್ಷೇತ್ರಗಳಿಗೆ ಹೊರಟು ನಿಲ್ಲುವ ಮಹಿಳೆಯರು ಆರಾಮವಾಗಿ ಹೋಗಿ ಬರಲಿ. ಸಾರಿಗೆ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗದಂತೆಯೂ ಗಮನ ಹರಿಸಲಾಗುವುದು ಎಂದರು.

Leave a Reply

Your email address will not be published. Required fields are marked *

Back to top button