Breaking Newsಸುದ್ದಿ ಸಮಾಚಾರ

ಚಾಮುಂಡಿ ದಸರವೇ ಇರಲಿ ಮಹಿಷಾಸುರ ದಸರಾ ಬೇಡ : ರಾಷ್ಟ್ರೀಯ ಹಿಂದೂ ಪರಿಷತ್ತು

ಮೈಸೂರು: ಶತಶತಮಾನಗಳಿಂದ ರಾಜ ಮಹಾರಾಜರು ಬಹಳ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವಂತಹ ಮೈಸೂರು ಚಾಮುಂಡೇಶ್ವರಿಯ ನಾಡಹಬ್ಬ ದಸರಾ ಸಂಭ್ರಮವನ್ನು ಹಾಳು ಮಾಡಲು ಕೆಲವು ಬುದ್ಧಿಜೀವಿಗಳು ಪ್ರಯತ್ನಿಸುತ್ತಿರುವುದು ಈ ನಾಡಿನ ಸಮಸ್ತ ನಾಗರಿಕ ಮತ್ತು ಪುರಾತನ ಪಾರಂಪರಿಕವಾಗಿ ನಡೆದು ಬಂದಂತಹ ಈ ಸಂಭ್ರಮಕ್ಕೆ ಅಡ್ಡಿಪಡಿಸಲು ಹೊರಟಿರುವುದು ದುರಾದೃಷ್ಟಕರ
ಎಂದು ರಾಷ್ಟ್ರೀಯ ಹಿಂದೂ ಪರಿಷತ್ನ ಎಂ ಎಸ್ ಹರೀಶ್ ರವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಯಾವುದೇ ಕಾರಣಕ್ಕೂ ಈ ಬುದ್ಧಿಜೀವಿಗಳ ಒತ್ತಡಕ್ಕೆ ಮಣಿದು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಹಾಗೇನಾದರೂ ಆದರೆ ರಾಜ್ಯಾದ್ಯಂತ ಕೋಮು ಗಲಭೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಎಂದು ಹರೀಶ್ ರವರು ಹೇಳಿದರು.

ಮಾನ್ಯ ಮುಖ್ಯಮಂತ್ರಿಗಳೇ ನೀವು ಕೂಡ ಚಾಮುಂಡೇಶ್ವರಿಯ ತಪ್ಪಲಿನಲ್ಲಿ ಆಟವಾಡುತ್ತಾ ಬೆಳೆದಂತಹ ವ್ಯಕ್ತಿ ನೀವು ಯಾವುದೇ ಕಾರಣಕ್ಕೂ ಇಂತಹ ಪಾರಂಪರಿಕ ಸಂಸ್ಕೃತಿಕ ಉತ್ಸವಕ್ಕೆ ಅಡಚಣೆಯಾಗುವಂತಹ ಅವಕಾಶವನ್ನು ಮಾಡಿಕೊಡಬಾರದು ಎನ್ನುವುದು ರಾಷ್ಟ್ರೀಯ ಹಿಂದೂ ಪರಿಷತ್ತಿನಿಂದ ಆಗ್ರಹ ಮಾಡುತ್ತಿದ್ದೇವೆ.

Leave a Reply

Your email address will not be published. Required fields are marked *

Back to top button