Breaking Newsಕರ್ನಾಟಕ ರಾಜಕೀಯ

ಬಿ ಎಲ್‌ ಸಂತೋಷ್ ಪರವಾಗಿ ಒಂದು ಗ್ಯಾಂಗ್ ಇದೆ: ಆಕ್ರೋಶ ಹೊರ ಹಾಕಿದ ಮಾಜಿ ಸಚಿವ ರೇಣುಕಾಚಾರ್ಯ

ಬೆಂಗಳೂರು: ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಬಿ ಎಸ್‌ ಯಡಿಯೂರಪ್ಪನವರು. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದರಲ್ಲ ನಿಮಗೆ ಅಯ್ಯೊ ಅನಿಸಲಿಲ್ಲವೇ. ನೀವು ಒಂದು ಗ್ಯಾಂಗ್‌ ಕಟ್ಟಿದ್ದೀರಿ. ಕೆಲಸಕ್ಕೆ ಬಾರದವರನ್ನು, ಜನರಿಂದ ಆಯ್ಕೆಯಾಗದವರನ್ನು ಕಟ್ಟಿಕೊಂಡು ಬಿಜೆಪಿ ಕಚೇರಿ ನಡೆಸುತ್ತಾ ಇದ್ದೀರಿ ಎಂದು ಬಿ ಎಲ್‌ ಸಂತೋಷ್‌ ಅವರ ಹೆಸರನ್ನು ಹೇಳದೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ಆಕ್ರೋಶ ಹೊರ ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಧನೆಗಳನ್ನು ನಾನು ಜನರಿಗೆ ತಲುಪಿಸಿದ್ದೇನೆ. ಆದರೆ ನೀವ್ಯಾರು ಪಾರ್ಟಿ ಕಟ್ಟಿಲ್ಲ. ನಾನು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಮೋದಿ ಅವರು ಮತ್ತೆ ಪ್ರಧಾನ ಮಂತ್ರಿಯಾಗಬೇಕು ಎಂದರು.

ನೀವು ಗಟ್ಟಿಯಾಗಿ ಮಾತನಾಡುವವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದೀರಿ. ಜಗದೀಶ್‌ ಶೆಟ್ಟರ್‌ ಏನು ಅಪರಾಧ ಮಾಡಿದ್ದರು. ಅವರಿಗೇನು ವಯಸ್ಸಾಗಿತ್ತಾ. ಅವರ ತಂದೆ ಜನಸಂಘದ ಕಾಲದಿಂದ ಬಂದವರು. ಮುಖ್ಯಮಂತ್ರಿಯಾಗಿದ್ದ ಶೆಟ್ಟರ್‌ ಅವರಿಗೆ ಟಿಕೆಟ್‌ ಕೊಡಲಿಲ್ಲ. ಅನ್ಯಾಯ ಮಾಡಲಿಲ್ಲವೇ ನೀವು ಎಂದು ಪ್ರಶ್ನಿಸಿದರು.

ಎಲ್ಲೊ ಒಂದು ಲಿಂಗಾಯತ ವಿರೋಧಿ ಮಾಡ್ತಾ ಇದ್ದೀರಿ. ಜೊತೆಗೆ ಸವದಿ ಅವರನ್ನು ಕಡೆಗಣಿಸಿದ್ದೀರಿ. ಬಿ ಎಸ್‌ ಯಡಿಯೂರಪ್ಪನವರು ಅಂದು ಎಲ್ಲವನ್ನೂ ಮಾಡಿದವರು. ಅವರಿಗೆ ಸಾಥ್‌ ನೀಡಿದವರು ಅನಂತ್‌ ಕುಮಾರ್‌ ಅವರು. ಕೆ ಎಸ್‌ ಈಶ್ವರಪ್ಪನವರಿಗೆ ಟಿಕೆಟ್‌ ನೀಡಲಿಲ್ಲ. ಎಲ್ಲರನ್ನೂ ಪಾರ್ಟಿಯಿಂದ ಹೊರಗೆ ಕಳಿಸಲು ನೋಡ್ತಾ ಇದ್ದೀರಿ. 72 ಹೊಸಬರಿಗೆ ಟಿಕೆಟ್‌ ನೀಡಿದ್ದು, ತಾವು ಮುಖ್ಯಮಂತ್ರಿಯಾಗಬೇಕು ಎಂದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸೋಲಿಗೆ ಇವರು ಕೊಟ್ಟ ಪ್ಲಾನ್‌ಗಳೇ ಕಾರಣ. ಆದ್ದರಿಂದಲೇ ಬಿಜೆಪಿ ಹೀನಾಯ ಸೋಲು ಕಂಡಿತು. ಇನ್ನು ಮುಂದಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅವರು ಇಡೀ ಪಕ್ಷವನ್ನು ಕಂಟ್ರೋಲ್ ಮಾಡ್ತಿದ್ದಾರೆ. ‘ಬಿಜೆಪಿ ಸೋಲಿಗೆ ಯಡಿಯೂರಪ್ಪ ಶಾಪ ಕಾರಣʼ ನಿನ್ನೆ ಸಭೆ ಮಾಡಿದವರು ಬಿಜೆಪಿ ಕಟ್ಟಿ ಬೆಳೆಸಿದವರಲ್ಲ ಎಂದರು.

Leave a Reply

Your email address will not be published. Required fields are marked *

Back to top button