Others

ಪಕ್ಷ ಬಯಸಿದರೆ ಎಂಪಿ ಚುನಾವಣೆಗೆ ಬೀದರಿನಿಂದ ಸ್ಪರ್ಧೆ: ಅಶೋಕ್ ಖೇಣಿ

ಬೀದರ್ : ಸರ್ವಧರ್ಮಿಯರನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಬಯಸಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೀದರಿನಿಂದ ಸ್ಪರ್ಧಿಸಲು ಸಿದ್ಧ ಎಂದು ಮಾಜಿ ಶಾಸಕ ಅಶೋಕ್ ಖೇಣಿ ಹೇಳಿದರು.
ಬೀದರ್ ತಾಲೂಕಿನ ಬಗದಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಚಿಂತನ – ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೆ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಇನ್ನು ಮುಂದೆಯೂ ಜನರ ಸೇವೆ ಮುಂದುವರಿಸುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಿದ ಎಲ್ಲಾ ಮತದಾರರಿಗೂ ಕೃತಜ್ಞನಾಗಿರುವೆ. ಮುಂದೆಯೂ ಅವಕಾಶ ಸಿಕ್ಕಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಜನ ಸೇವೆ ಮುಂದುವರಿಸುತ್ತೇನೆ ಎಂದರು.
ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಎದುರಾಗಲಿದೆ. ಈ ಚುನಾವಣೆಯನ್ನು ಎದುರಿಸಲು, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಲು ಕಾರ್ಯಕರ್ತರು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಮುಖಂಡರಾದ ಬಾಬುರಾವ್ ತುಂಬಾ, ಪಂಡಿತರಾವ್ ಚಿದ್ರಿ, ತನ್ವೀರ್ ಅಹಮ್ಮದ್, ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಂಸಾಬ್ ಕಮಠಾಣ, ಶಾಮರಾವ್ ಬಂಬಳಗಿ, ಅಮೃತರಾವ್ ಪಾಟೀಲ, ಸಚಿನ್ ಮಲ್ಕಾಪುರ, ರಮೇಶ ಹೌದಖಾನಿ, ಗೋವರ್ಧನ್ ರಾಠೋಡ್, ಉದಯಕುಮಾರ ಮಲಶೆಟ್ಟಿ, ಬಶೀರೊದ್ದಿನ್ ಸೌದಾಗರ್, ಲೋಕೇಶ ಮಂಗಲಗಿ, ಶಾಮರಾವ್ ಬಂಬಳಗಿ, ಖಯಾಮ್, ಗೌತಮ, ಜಯಪ್ರಕಾಶ, ಲೋಕೇಶ ಕನಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button