Breaking Newsಸುದ್ದಿ ಸಮಾಚಾರ

ಮಹಾಘಟಬಂಧನ್ ಸಭೆಯಿಂದ ದೂರ ಉಳಿದ ದಕ್ಷಿಣ ಭಾರತದ 4 ಜನಪ್ರತಿನಿಧಿಗಳು

ಬೆಂಗಳೂರು: ಎನ್.ಡಿ.ಎ ಸರಕಾರದ ವಿರುದ್ಧ ಯುಪಿಎ ಒಗ್ಗಟ್ಟಿನಿಂದ ಹೋರಾಡಲು ಶ್ರಮಿಸುತ್ತಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ಸಭೆ ಕರೆದಿದ್ದು, ಆದರೆ ದಕ್ಷಿಣ ಭಾರತದ ನಾಲ್ವರು ಪ್ರಮುಖ ನಾಯಕರು ಮಾತ್ರ ಈ ಸಭೆಯಿಂದ ದೂರವೇ ಉಳಿದುಕೊಂಡಿದ್ದಾರೆ.


ಎಚ್.ಡಿ.ಕುಮಾರಸ್ವಾಮಿ


ಮಾಜಿ ಸಿಎಂ, ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಯುಪಿಎ ನೇತೃತ್ವದ ಮುಖಂಡರಿಂದ ಯಾವುದೇ ಆಹ್ವಾನ ಬಂದಿಲ್ಲ. ಆದ್ದರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ, ಎರಡೂ ಬಾರಿಯೂ ಸಿಎಂ ಆಗಿದ್ದ ಕುಮಾರಸ್ವಾಮಿ, ಈ ಬಾರಿ ಬಿಜೆಪಿ ಜೊತೆ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಚಂದ್ರಬಾಬು ನಾಯ್ಡು


ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕೂಡ ಎರಡೂ ಸಭೆಗಳಿಂದ ದೂರ ಉಳಿದಿದ್ದಾರೆ. ಎನ್ಡಿಎ ಅಥವಾ ಯುಪಿಎ ಇಂದ ಯಾವುದೇ ಆಹ್ವಾನ ಬಾರದ ಕಾರಣ, ಚಂದ್ರಬಾಬು ನಾಯ್ಡು ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕೆ.ಚಂದ್ರಶೇಖರ ರಾವ್


ಭಾರತ್ ರಾಷ್ಟ್ರ ಸಮಿತಿ ಸ್ಥಾಪಿಸುವ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸುವ ಕನಸು ಕಂಡಿರುವ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಕೂಡ ಯಾವುದೇ ಸಭೆಯಲ್ಲಿ ಭಾಗವಹಿಸದೆ ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದ ಕೆ. ಚಂದ್ರಶೇಖರ್ ರಾವ್ ಅವರು ಈ ಬಾರಿ ಯುಪಿಎ ಸರಕಾರದಿಂದಲೂ ಅಂತರ ಕಾಯ್ದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವೈ.ಎಸ್. ಜಗನ್ಮೋಹನ್ ರೆಡ್ಡಿ


ಆಂಧ್ರಪದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಕೂಡ ಯುಪಿಎ ನೇತೃತ್ವದ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆಂಧ್ರಪ್ರದೇಶಕ್ಕೆ ಮೋದಿ ಭೇಟಿ ನೀಡಿದಾಗಲೂ, ಎನ್.ಡಿ.ಎ ಸೇರುವಂತೆ ಮೋದಿ ನೀಡಿದ ಆಹ್ವಾನವನ್ನು ಜಗನ್ಮೋಹನ್ ನಿರಾಕರಿಸಿದ್ದರು.

Leave a Reply

Your email address will not be published. Required fields are marked *

Back to top button