Breaking Newsಸಚಿವರ ಕಚೇರಿಯಿಂದ

ಶಾಲೆಗಳ ದತ್ತು ವಿಚಾರ, ಬಿಜೆಪಿಯವರು ದುರ್ಬುದ್ದಿ ಬಿಡಬೇಕು,ಅವರಿಗೆ ತಲೆಕೆಟ್ಟಿದೆ: ಕಿಡಿಕಾರಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಶಾಲೆಗಳ ದತ್ತು ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕಿಡಿ ಕಾರಿದ್ದಾರೆ.

ಬಿಜೆಪಿಯವರಿಗೆ ತಲೆಕೆಟ್ಟಿದೆ. ಅವರು ಸುಳ್ಳು ಹಬ್ಬಿಸುವ ಕೆಲಸವನ್ನು ಮಾಡ್ತಾನೆ ಇರ್ತಾರೆ. ಐದು ವರ್ಷ ಅವರು ಇದೇ ತಲೆಕೆಟ್ಟ ಕೆಲಸ ಮಾಡ್ತಾ ಇರ್ತಾರೆ. ನೀವೇಕೆ ಸುದ್ದಿ ಹಾಕುತ್ತೀರಾ ಎಂದು ಮಾಧ್ಯಮಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗಳ ದತ್ತು ಸಂಬಂಧ ವಿವರ ನೀಡಿದ ಸಚಿವರು, ಇದೊಂದು ಸರಳವಾದ ಕೆಲಸ. ದೊಡ್ಡದೊಡ್ಡ ಖಾಸಗಿ ಶಾಲೆಗಳಿವೆ. ಅವರೇ ಮುಂದೆ ಬಂದು ಸೇವೆ ನೀಡ್ತಾರೆ. ಇದು ಉದ್ಯಮದ ರೀತಿ. ಸಿಎಸ್‌ಆರ್‌ ಅಂದ್ರೆ ಇವರಿಗೂ ಕಾಳಜಿ ಇದೆ. ನನಗೂ ಡೆಂಟಲ್‌ ಕಾಲೇಜು ಇದೆ. ನಾನೂ ಒಂದೆರಡು ಶಾಲೆ ತಗೋಬೇಕು ಅಂತ ಇದ್ದೇನೆ. ಹಾಗಾದರೆ ಅದೇನು ಖಾಸಗಿಕರಣವೇ? ಅಲ್ಲ. ಆಡಳಿತ ಅವರ ನಿಯಂತ್ರದಲ್ಲಿ ಇರಲ್ಲ. ಅವರು ಕೆಲವು ಸೇವೆ ನೀಡ್ತಾರೆ. ಅದು ಸಿಬ್ಬಂದಿ ಇರಬಹುದು. ಪ್ರಯೋಗಾಲಯ, ಕಂಪ್ಯೂಟರ್‌ ಇರಬಹುದು. ಕಟ್ಟಡ ಕೊಡಬಹುದು. ಹಂಚು ಹಾಕಿ ಕೊಡಬಹುದು. ಶೌಚಾಲಯ ಕಟ್ಟಿ ಕೊಡಬಹುದು. ಹೆಚ್ಚುವರಿ ಶಿಕ್ಷಕರನ್ನು ನೀಡಬಹುದು ಎಂದು ಹೇಳಿದರು.

ಇದನ್ನೆಲ್ಲ ತಿಳಿಯದ ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಬಿಜೆಪಿಯವರಿಗೆ ಒಂದು ದುರ್ಬುದ್ದಿಇದೆ, ಮಾತೆತ್ತಿದರೆ ಬೇರೆ ಬೇರೆ ಹಾದಿಗೆ ತಗೊಂಡು ಹೋಗೋದು. ಅದನ್ನು ಅವರು ನಿಲ್ಲಿಸಬೇಕು ಎಂದರು.

ನಮ್ಮ ಉಪ ಮುಖ್ಯಮಂತ್ರಿಗಳಾಗಲಿ, ನಾನಾಗಲಿ ಹೇಳಿಲ್ಲ. ನಾನೇ ಮೂರು ಶಾಲೆ ದತ್ತು ತಗೋತಿನಿ. ಬೇರೆ ಕಡೆ ಹಾಗೆ ಮಕ್ಕಳನ್ನು ದತ್ತು ತಗೊಳ್ಳೊ ರೀತಿ ಅಲ್ಲ. ಸೇವೆಗಳಿಗೆ ಮಾತ್ರವೇ ದತ್ತು ಪಡೆಯುವುದು. ನನ್ನ ಸಂಸ್ಥೆ ಚೆನ್ನಾಗಿ ನಡಿಯುತ್ತಾ ಇದೆ. ನನಗೆ ಸಾಮಾಜಿಕ ಜವಾಬ್ದಾರಿ ಇದೆ. ನಾವು ಸಹಾಯ ಮಾಡಿಕೊಡಬೇಕು. ಇದಕ್ಕಿಂತ ದೊಡ್ಡತನ ಬೇರೆ ಏನಿದೆ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಕೆಲಸ ಇಲ್ಲದೆ ಹಾದಿ ತಪ್ಪಿಸುವ ಕೆಲಸ ಮಾಡುತ್ತಾ ಇದ್ದಾರೆ. ಅವರಿಗೆ ತಿರುಚಿ ಹೇಳೊದೆ ಕೆಲಸ. ಸೋತು ಸುಣ್ಣವಾದ ಅವರು ಮನಸ್ಸಿಗೆ ಬಂದ ಹಾಗೆ ಹೇಳೋದು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Back to top button