Others

ಗ್ರಾಮ ಪಂಚಾಯತ್ ಅಧೀನಕ್ಕೆ ಗ್ರಂಥಾಲಯ ಪಡೆಯಲು,
ಸಚಿವ ಪ್ರಿಯಾಂಕ್‌ ಖರ್ಗೆಗೆ ಮನವಿ ಮಾಡಿದ ನಾಗತಿಹಳ್ಳಿ

ಬೆಂಗಳೂರು 27 ಜುಲೈ 2023: ಚಲನಚಿತ್ರ ನಿರ್ದೇಶಕ ಶ್ರೀ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಶ್ರೀ ಪ್ರಿಯಾಂಕ್‌ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ತಾವು ವೈಯಕ್ತಿಕವಾಗಿ ಅಭಿವೃದ್ಧಿ ಪಡಿಸಿರುವ ಗ್ರಂಥಾಲಯವನ್ನು ಗ್ರಾಮ ಪಂಚಾಯತಿ ಅಧೀನಕ್ಕೆ ತೆಗೆದುಕೊಳ್ಳುವಂತೆ ಕೋರಿದರು. ವಿಚಾರ ಪ್ರಚೋದಕ ಕೃತಿಗಳು ಸೇರಿದಂತೆ ವಿವಿಧ ಪ್ರತಿಷ್ಠಿತ ಲೇಖಕರ ಸುಮಾರು 10,000 ಪುಸ್ತಕಗಳನ್ನು ಗ್ರಂಥಾಲಯ ಹೊಂದಿದೆಯೆಂದು ನಾಗತಿಹಳ್ಳಿ ಸಚಿವರಿಗೆ ತಿಳಿಸಿದರು. ಸಚಿವ ಶ್ರೀ ಖರ್ಗೆ ಅವರು ಗ್ರಂಥಾಲಯವನ್ನು ಪಂಚಾಯತಿ ವ್ಯಾಪ್ತಿಗೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಕಲಾವಿದ ಶ್ರೀ ಮುತ್ತುರಾಜು ನಾಗತಿಹಳ್ಳಿ ಅವರೊಂದಿಗಿದ್ದರು.

Leave a Reply

Your email address will not be published. Required fields are marked *

Back to top button