ಸುದ್ದಿ ಸಮಾಚಾರ

ಜುಲೈ 23ರಂದು ಬೆಂಗಳೂರಿನಲ್ಲಿ ಕುಂದಾಪ್ರ ಕನ್ನಡ ಹಬ್ಬ | ಅತ್ತಿಗುಪ್ಪೆ ಬಂಟರ ಭವನದಲ್ಲಿ ಭಾವ ಬೀದಿಯಲಿ ಭಾಷೆಯ ತೇರು | ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನ ಆಯೋಜನೆ

ಬೆಂಗಳೂರು: ಇಲ್ಲಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ ಸಹಯೋಗದಲ್ಲಿ ಕುಂದಾಪ್ರ ಕನ್ನಡ ಹಬ್ಬ ಕಾರ್ಯಕ್ರಮ ಜುಲೈ 23ರಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಬೆಂಗಳೂರಿನ ಅತ್ತಿಗುಪ್ಪೆ ಬಂಟರ ಭವನದಲ್ಲಿ ನಡೆಯಲಿದೆ.


ಭಾವ ಬೀದಿಯಲಿ ಭಾಷೆಯ ತೇರು ಎನ್ನುವ ಧ್ಯೇಯವಾಕ್ಯದೊಂದಿಗೆ ವೈವಿಧ್ಯ ಕಾರ್ಯಕ್ರಮ ದಿನವಿಡೀ ಹಮ್ಮಿಕೊಳ್ಳಲಾಗಿದೆ. ಖಾದ್ಯ ವೈವಿಧ್ಯ, ಭಾಶಿ- ಬದ್ಕ್ ಸೆಲ್ಫಿ – ಕುಲ್ಫಿ, ಒಂದೇ ಒಂದು ಆಟ, ತೇರು ಊರು, ಹಾಡು – ಹಸೆ ನಗು – ನೃತ್ಯ, ನುಡಿ ಚಾವಡಿ, ಬಯಲಾಟ ಮೊದಲಾದವು ಕುಂದಾಪ್ರ ಕನ್ನಡ ಹಬ್ಬದ ವಿಶೇಷತೆ.
ಬನ್ನಿ ರಥಬೀದಿಯ ಇಕ್ಕೆಲದಲ್ಲಿ ನೀವೇ ರಂಗೋಲಿ ಎನ್ನುವ ಪ್ರೀತಿಯ ಆಮಂತ್ರಣವೇ ಕಾರ್ಯಕ್ರಮದ ಸೊಬಗನ್ನು ಸಾರಿ ಹೇಳುವಂತಿದೆ.

Leave a Reply

Your email address will not be published. Required fields are marked *

Back to top button