Breaking Newsಸಚಿವರ ಕಚೇರಿಯಿಂದ

ವೈಟ್ ಬೋರ್ಡ್ ಕಾರು ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಚಿಂತನೆ – ಆಹಾರ ಸಚಿವ ಮುನಿಯಪ್ಪ

ಬೆಂಗಳೂರು: ವೈಟ್ ಬೋರ್ಡ್ ಕಾರು ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ. ಆದರೆ ಯಲ್ಲೋ ಬೋರ್ಡ್ ಕಾರು ಇದ್ದರೆ ಬಿಪಿಎಲ್‌ ಕಾರ್ಡ್ ನೀಡಲಾಗುವುದು. ಈ ಬಗ್ಗೆ ಚರ್ಚೆ ಮಾಡಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್‌ ಮುನಿಯಪ್ಪ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೊಸ ಪಡಿತರ ಕಾರ್ಡ್ ವಿತರಣೆ ಕುರಿತು ಮಾಹಿತಿ ನೀಡಿದರು.

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ರೇಷನ್​​ ಕಾರ್ಡ್ ವಿತರಣೆ ನಿಲ್ಲಿಸಲಾಗಿತ್ತು. ಈಗ ಹೊಸ ಪಡಿತರ ಕಾರ್ಡ್​ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅವರು ತಿಳಿಸಿದರು.

ಪಡಿತರ ಕಾರ್ಡ್​ಗೆ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಕಾರ್ಡ್​ನಲ್ಲಿರುವ ಮೃತರ ಹೆಸರನ್ನು ತೆರವುಗೊಳಿಸಲು ಸೂಚಿಸಲಾಗಿದೆ. ರಾಗಿ, ಜೋಳಕ್ಕೆ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಹಸಿದವರಿಗೆ ಅನ್ನ ಸಿಗಬೇಕು:

ಅನ್ನಭಾಗ್ಯದ ಉದ್ದೇಶ ಹಸಿದವರಿಗೆ ಅನ್ನ ಸಿಗಬೇಕು ಎಂಬುದು. ಈವರೆಗೆ ಒಂದು ಕೋಟಿ ಕುಟುಂಬಗಳಿಗೆ ಅಕ್ಕಿ ಬದಲು ಹಣ ಹಾಕಲಾಗಿದೆ. 3.50 ಕೋಟಿ ಫಲಾನುಭವಿಗಳಿಗೆ ಸುಮಾರು 556 ಕೋಟಿ ಹಣವನ್ನ ಹಾಕಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸರ್ಕಾರ ನಮಗೆ ಅಕ್ಕಿ ನೀಡಲು ಮುಂದಾಗಿವೆ. ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಲಾಗುವುದು. ಸೆಪ್ಟೆಂಬರ್ ತಿಂಗಳಿನಲ್ಲಿ 10 ಕೆ ಜಿ ಅಕ್ಕಿ ವಿತರಿಸುವ ಚಿಂತನೆ ಇದೆ ಎಂದರು.

Leave a Reply

Your email address will not be published. Required fields are marked *

Back to top button