Breaking Newsಮುಖ್ಯಮಂತ್ರಿ ನ್ಯೂಸ್ಸಚಿವರ ಕಚೇರಿಯಿಂದ

ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ: ಸಚಿವರ ಶುಭ ಹಾರೈಕೆ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೂರು ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಸಂಪುಟದ ಸಚಿವರು ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

ಸಂತೋಷ್‌ ಲಾಡ್‌ ಹಾರೈಕೆ:
ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಸಮರ್ಥ ಆಡಳಿತ ನೀಡುತ್ತಿರುವ ನಮ್ಮ ಸರ್ಕಾರ ನೂರನೇ ದಿನಕ್ಕೆ ಕಾಲಿಟ್ಟಿದೆ. ನುಡಿದಂತೆ ನಡೆಯುತ್ತ, ದಿಟ್ಟ, ಪ್ರಾಮಾಣಿಕ, ಜನಪರ ಆಡಳಿತ ನೀಡುವುದೇ‌ ನಮ್ಮ ಸರ್ಕಾರದ ಮೊದಲ‌ ಆದ್ಯತೆ ಎಂದು ಹೇಳಿದ್ದಾರೆ.

ಶಿವಾನಂದ ಪಾಟೀಲ್‌ ಹಾರೈಕೆ:
ನಮ್ಮ ಸರ್ಕಾರ ಶತ ದಿನಗಳನ್ನು ಪೂರೈಸಿದೆ. ನಮ್ಮ ಗ್ಯಾರಂಟಿಗಳ ಅನುಷ್ಠಾನಗಳ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿ ನಾವು ಇನ್ನೂ ಉತ್ತಮ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ.

ಎಚ್‌ ಕೆ ಪಾಟೀಲ್‌ ಶುಭಾಶಯ:
ಮತದಾರ ಪ್ರಭುಗಳಿಗೆ ನೀಡಿದ ವಾಗ್ದಾನದಂತೆ ನಡೆಯುತ್ತಿರುವ ನಮ್ಮ ಜನಪರ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. ಗ್ಯಾರಂಟಿಗಳ ಜಾರಿಯೊಂದಿಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button