Breaking Newsಸುದ್ದಿ ಸಮಾಚಾರ

ಡಿ. ದೇವರಾಜ ಅರಸು ಪ್ರಶಸ್ತಿಗೆ ಭಾಜನರಾದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸ್ಪೀಕರ್ ಶ್ರೀ ಕಾಗೋಡು ತಿಮ್ಮಪ್ಪ

ಬೆಂಗಳೂರು: ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರು ಭಾಜನರಾಗಿದ್ದಾರೆ ಎಂದು ಅಭಿನಂಧನೆ ಸಲ್ಲಿಸುವುದರ ಮೂಲಕ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.

ಸಮಾಜವಾದಿ ಸಿದ್ಧಾಂತಕ್ಕೆ ತನ್ನನ್ನು ಅರ್ಪಿಸಿಕೊಂಡಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು, ಉಳುವವನನ್ನೇ ಭೂಮಿಯ ಒಡೆಯನಾಗಿ‌ ಮಾಡುವ ಭೂ ಹೋರಾಟದ ಮೂಲಕವೇ ರಾಜಕೀಯ ಜೀವನ‌ ಪ್ರವೇಶಿಸಿದವರು.

ದೇವರಾಜ ಅರಸು ಅವರ ಗರಡಿಯಲ್ಲಿಯೇ ಬೆಳೆದಿರುವ ತಿಮ್ಮಪ್ಪನವರು ಭೂ ಸುಧಾರಣಾ ಕಾಯ್ದೆಯಷ್ಟೇ ಕ್ರಾಂತಿಕಾರಿಯಾದ “ವಾಸಿಸುವವನನ್ನೇ ಮನೆ ಒಡೆಯ” ನನ್ನಾಗಿ ಮಾಡುವ ಕ್ರಾಂತಿಕಾರಿ ಕಾಯ್ದೆಯ ರೂವಾರಿಗಳು ಎಂದು ಕಾಗೋಡು ತಿಮ್ಮಪ್ಪನವರನ್ನು‌ ಸಿಎಂ ಸಿದ್ದರಾಮಯ್ಯ ಪ್ರಶಂಶಿಸಿದ್ದಾರೆ.

Leave a Reply

Your email address will not be published. Required fields are marked *

Back to top button