Breaking Newsಕರ್ನಾಟಕ ರಾಜಕೀಯ

ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ, ಮಾಜಿ ಸಚಿವರು ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ ಗೋಪಾಲಯ್ಯ

ತೆಲಂಗಾಣ: ಮುಂಬರುವ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ಅಣಿ ಗೊಳಿಸಲು ಕೇಂದ್ರ ಬಿಜೆಪಿ ಹೈಕಮಾಂಡ್, ಸೂಚನೆ ಮೇರೆಗೆ ಮಾಜಿ ಸಚಿವರು ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ ಗೋಪಾಲಯ್ಯ ರವರು ಈಗಾಗಲೇ ತೆಲಂಗಾಣ ರಾಜ್ಯ ಪ್ರವಾಸದಲ್ಲಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ಕ್ಷೇತ್ರದ ಗೆಲುವಿಗೆ ಹೇಗೆಲ್ಲ ತಯಾರಿ ಹಾಗೂ ತಂತ್ರಗಾರಿಕೆ ಮಾಡಬೇಕು ಎಂದು ಇಂದು ಕೂಡ ಕ್ಷೇತ್ರದ ಹಲವು ಏರಿಯಾಗಳಿಗೆ ಸಂಚರಿಸಿ ಆಯಾ ಭಾಗದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡೋಣ ಎಂದು ಕೆ ಗೋಪಾಲಯ್ಯ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯ ಕಾರಿಣಿ ಸದಸ್ಯರುಗಳಾದ ಡಾ, ಪ್ರೇಮ್ ರಾಜ್, ಬಿ, ವೇಣುಗೋಪಾಲ್ ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೈ ಶ್ರೀಧರ್, ಮುಖಂಡರುಗಳಾದ ಮಲ್ಲೇಶ್, ಎಂ ಕೊಮಾರಯ್ಯ, ನಂದಕಿಶೋರ್ ಮತ್ತು ವಿ ಚಂದ್ರಯ್ಯ ಉಪಸ್ಥಿತರಿದ್ದರು. ಹಾಗೆಯೇ ಇಂದು ಶಂಶಬಾದ ಮಂಡಲ ಹಾಗೂ ಮುನ್ಸಿಪಾಲಿಟಿ ಮೀಟಿಂಗ್ ಕರೆದಿದ್ದಾರೆ.

Leave a Reply

Your email address will not be published. Required fields are marked *

Back to top button