Breaking Newsಸುದ್ದಿ ಸಮಾಚಾರ

ಸಾಮಾಜಿಕ ಸೇವಾ ಸಾಧನೆಗಾಗಿ, ಜಗದೀಶ್ ಜಿ ಶೇಠ್ ರವರಿಗೆ 2023 ನೇ ಸಾಲಿನ ರಾಜ್ಯಮಟ್ಟದ “ಏಕತಾ ಸಮಾಜ ಸೇವಾಶ್ರೀ” ಪ್ರಶಸ್ತಿ

ಶಿವಮೊಗ್ಗ: ಸತ್ಯ ಅನ್ವೇಷಣೆ ಪಾಕ್ಷಿಕ ಪತ್ರಿಕೆ ಹಾಗೂ ಸತ್ಯ ಅನ್ವೇಷಣೆ ನ್ಯೂಸ್ ನ ಶಿವಮೊಗ್ಗದ ಹೊಸನಗರ ತಾಲೂಕು ವಿಭಾಗದ ವರದಿಗಾರರಾದ ಶ್ರೀಯುತ ಜಗದೀಶ್.ಜಿ.ಶೇಠ್ ರವರು ಮಾಡಿರುವ ಸಾಮಾಜಿಕ ಸೇವಾ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಏಕತಾ ಫೌಂಡೇಶನ್ ನಿಂದ 2023 ನೇ ಸಾಲಿನ ರಾಜ್ಯಮಟ್ಟದ “ಏಕತಾ ಸಮಾಜ ಸೇವಾಶ್ರೀ” ಪ್ರಶಸ್ತಿಯನ್ನು ಕೊಡಲಾಯಿತು.

ಇವರು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಷನ್, ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ಫೌಂಡೇಶನ್ ಫಾರ್ ಡ್ರಗ್ ಫ್ರೀ ವರ್ಲ್ಡ್ ಇಂಟರ್ನ್ಯಾಷನಲ್ ಲಾಸ್ ಏಂಜಲ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ಆಲ್ ಇಂಡಿಯಾ ಕೌನ್ಸಿಲ್ ಆಫ್ ಹ್ಯೂಮನ್ ರೈಟ್ಸ್ ಅಂಡ್ ಸೋಶಿಯಲ್ ಜಸ್ಟಿಸ್…. ಹೀಗೆ ಇನ್ನೂ ಹಲವು ಅಂತರಾಷ್ಟ್ರೀಯ ಸಂಘಟನೆಗಳಲ್ಲಿ ಸದಸ್ಯರಾಗಿದ್ದು ಸುಮಾರು 84 ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ, 14 ಹೃದ್ರೋಗಿಗಳಿಗೆ ಹೃದಯ ಕಸಿ ಶಸ್ತ್ರ ಚಿಕಿತ್ಸೆ, 8 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, 2000 ಕ್ಕೂ ಹೆಚ್ಚಿನ ಮಂದಿಗೆ ರಕ್ತದ ಪೂರೈಕೆ, 40ಕ್ಕೂ ಹೆಚ್ಚಿನ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಕಾರ್ಯ ಹಾಗೂ ಇನ್ನೂ ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸಿದ ಜಗದೀಶ್ ರವರಿಗೆ ಸತ್ಯ ಅನ್ವೇಷಣೆ ಪತ್ರಿಕಾ ತಂಡ, ಸ್ನೇಹಿತರು ಹಾಗೂ ಬಂಧು ಬಳಗದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

Back to top button