Breaking Newsಸುದ್ದಿ ಸಮಾಚಾರ

ಚಂದ್ರಯಾನ 3 ಯಶಸ್ವಿ: ಇಸ್ರೊಗೆ ಅಭಿನಂದನೆಯ ಮಹಾಪೂರ

ಬೆಂಗಳೂರು: ಚಂದ್ರಯಾನ 3 ಯಶಸ್ವಿಯಾಗುವಲ್ಲಿ ಅವಿಶ್ರಾಂತವಾಗಿ ದುಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ (ಇಸ್ರೊ) ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

ಚಂದ್ರಯಾನ 2 ರ ವೈಫಲ್ಯಗಳನ್ನು ಮೆಟ್ಟಿನಿಂತು ಅಭೂತಪೂರ್ವವಾಗಿ ಚಂದ್ರಯಾನ 3 ರ ಯಶಸ್ಸಿಗೆ ಸಾಕಷ್ಟು ಶ್ರಮವನ್ನು ಇಸ್ರೊ ಹಾಕಿತ್ತು. ಇಂದು ಎಲ್ಲಾ ವಿಜ್ಞಾನಿಗಳ ಪರಿಶ್ರಮಕ್ಕೆ ತಕ್ಕ ಫಲ ದೊರೆತಿದೆ.

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಲು ಇಸ್ರೊದ ಕೊಡುಗೆ ಮಹತ್ತರವಾಗಿದೆ. ವಿಶೇಷವಾಗಿ ಚಂದ್ರನ ದಕ್ಷಿಣ ದ್ರುವದಲ್ಲಿ ನೌಕೆ ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆ ಗಳಿಸುವಲ್ಲಿ ಇಸ್ರೊ ಶ್ರಮವನ್ನು ಅಸಂಖ್ಯಾತ ಭಾರತೀಯರು ಕೊಂಡಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button