Breaking Newsಸುದ್ದಿ ಸಮಾಚಾರ

ಸೂರ್ಯನತ್ತ ಜಿಗಿದ ಆದಿತ್ಯ ಎಲ್ -1| ಇಸ್ರೋದಿಂದ ಇನ್ನೊಂದು ಉಪಗ್ರಹದ ಯಶಸ್ವಿ ಉಡಾವಣೆ

ಬೆಂಗಳೂರು: ಆದಿತ್ಯ-ಎಲ್1 ಸೌರ ವೀಕ್ಷಣಾ ಉಪಗ್ರಹವನ್ನು ಇಂದು (ಸೆಪ್ಟೆಂಬರ್ 2) 11-50 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ PSLV-C57 ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗಿದೆ. ಈ ಮೂಲಕ ಇಸ್ರೊ ಆದಿತ್ಯ ಎಲ್ -1 ಉಡಾವಣೆಯ ಮೊದಲ ಹಂತದ ಯಶಸ್ಸು ಪಡೆದಿದೆ.

ಚಂದ್ರಯಾನ 3 ರ ಯಶಸ್ವಿ ನಂತರ ದಿನಕರನ ಅಧ್ಯಯನಕ್ಕೆ ಈ ಉಡಾವಣೆ ಮಾಡಲಾಗುತ್ತಿದ್ದು, ಸೂರ್ಯನ ಕುರಿತ ಮಾಹಿತಿಯನ್ನು ಭೂಮಿಗೆ ರವಾನಿಸಲಿದೆ.

ಚಂದ್ರಯಾನ 3 ರ ಯಶಸ್ವಿ ನಂತರ ವಿಶ್ವಮಟ್ಟದಲ್ಲಿ ಇಸ್ರೊ ಹೆಸರು ಮಾಡಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ನೌಕೆ ಇಳಿಸಿದ ಪ್ರಪಂಚದ ಮೊದಲ ದೇಶ ಎಂಬ ಕೀರ್ತಿಯನ್ನು ಇಸ್ರೊ ಗಳಿಸಿದೆ. ಇದೀಗ ಆದಿತ್ಯ ಎಲ್‌ 1 ಉಡಾವಣೆ ನಂತರ ಹೊಸ ಪ್ರಯೋಗವು ಭಾರತದ ಬಾಹ್ಯಾಕಾಶ ವಿಜ್ಞಾನದ ಹೊಸ ಮಗ್ಗುಲನ್ನು ವಿಶ್ವಕ್ಕೆ ತೋರಿಸಲಿದೆ.

ಭೂಮಿಯ ವಾತಾವರಣದಲ್ಲಿ ಸೂರ್ಯ ಬೀರುವ ಪರಿಣಾಮಗಳೇನು? ಹವಾಮಾನ ಬದಲಾವಣೆಯಲ್ಲಿ ಸೂರ್ಯನ ಪ್ರಭಾವವೇನು ಮುಂತಾದ ಹಲವು ಕುತೂಹಲಕಾರಿ ವಿಷಯಗಳ ಅಧ್ಯಯನಕ್ಕೆ ಈ ಆದಿತ್ಯ ಎಲ್‌ 1 ಸಹಾಯ ಮಾಡಲಿದೆ.

ಆದಿತ್ಯ ಎಲ್‌ 1 ಉಪಗ್ರಹವು ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದವರೆಗೆ ಸಾಗಲಿದೆ. ಭೂಮಿಯಿಂದ ಸೂರ್ಯನಿಗೆ ಇರುವ ಅಂತರ 15 ಕೋಟಿ ಕಿಲೋ ಮೀಟರ್. ಈ ಪೈಕಿ ಶೇ 1ರಷ್ಟು ದೂರಕ್ಕೆ ಮಾತ್ರವೇ ಈ ಉಪಗ್ರಹ ಸಾಗಲಿದೆ. ನಂತರ ಲಗ್ರಾಂಜಿಯನ್ ಪಾಯಿಂಟ್‌ ಎಂಬಲ್ಲಿ ನೆಲೆಗೊಂಡು ಅಲ್ಲಿಂದ ಮಾಹಿತಿ ರವಾನಿಸಲಿದೆ.

Leave a Reply

Your email address will not be published. Required fields are marked *

Back to top button