Breaking Newsಸುದ್ದಿ ಸಮಾಚಾರ

ಇಂದಿರಾ ಕ್ಯಾಂಟೀನ್‌ ಊಟದ ದರ ಹೆಚ್ಚಳ ವಾಪಸ್‌ ಪಡೆದ ಸರ್ಕಾರ: ಎಚ್ಚೆತ್ತುಕೊಂಡು ಸ್ಪಷ್ಟೀಕರಣ

ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ನೀಡುತ್ತಿದ್ದ ಊಟದ ದರ ಏರಿಕೆ ಮಾಡುವ ತೀರ್ಮಾನವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶನಿವಾರ ಸಂಜೆ ನಡೆದ ಸಚಿವ ಸಂಪುಟದಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿತ್ತು.

ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಹಳೇ ದರ ಮುಂದುವರಿಕೆಯಾಗಲಿದೆ. ಆದರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಂದು ಊಟದ ಬೆಲೆ ರೂ. 25 ಕ್ಕೆ ನಿಗದಿ ಮಾಡಲಾಗಿದೆ. ನೂತನವಾಗಿ ನಿರ್ಮಾಣವಾಗುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೊಸ ದರ ಜಾರಿಯಾಗಲಿದೆ ಎಂದು ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್‌ ಕೆ ಪಾಟೀಲ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದರು.

ಇಂದಿರಾ ಕ್ಯಾಂಟೀನ್‌ಗಳು ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡಲು ಆರಂಭ ಮಾಡಲಾಗಿತ್ತು. ಈಗ ಊಟದ ದರವನ್ನು 25 ರೂಪಾಯಿಗಳಿಗೆ ಏರಿಕೆ ಮಾಡಿದರೆ ಬಡವರು ಹೇಗೆ ಊಟ ಮಾಡುತ್ತಾರೆ. ಅಗತ್ಯ ವಸ್ತುಗಳ ದರ ಏರಿಕೆಯ ನಡುವೆ ಊಟದ ದರವನ್ನು ಹೆಚ್ಚಿಸಿದರೆ ಹೇಗೆ. 25 ರೂಪಾಯಿಗಳಿಗೆ ರಸ್ತೆ ಬದಿಗಳಲ್ಲೇ ಊಟ ಮಾಡುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಎಚ್‌ ಕೆ ಪಾಟೀಲ್‌ ಅವರು ಸರಿಯಾದ ಉತ್ತರ ನೀಡಿರಲಿಲ್ಲ.

ಆದರೆ ಎಚ್ಚೆತ್ತುಕೊಂಡ ಸರ್ಕಾರ ದರ ಏರಿಕೆಯನ್ನು ಹಿಂದಕ್ಕೆ ಪಡೆದು ಸ್ಪಷ್ಟೀಕರಣ ನೀಡಿದೆ.

ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಂದಿರಾ ಕ್ಯಾಂಟೀನ್ ಗೆ ಆಹಾರ ಸರಬರಾಜುದಾರರಿಗೆ ಸರ್ಕಾರ ನೀಡುವ ದರ 5 ರೂ ಹೆಚ್ಚಳವಾಗಿದೆ ಅಷ್ಟೆ.

ಈ ಮೊದಲು ಆಹಾರ ಸರಬರಾಜುದಾರರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತಲಾ 57 ರೂ ನೀಡಲಾಗುತ್ತಿತ್ತು. ಈಗ ಅದನ್ನು 62 ರೂಗೆ ಹೆಚ್ಚಿಸಲಾಗಿದೆ. ಆಹಾರ ಮೆನು ಬದಲಾವಣೆಯೊಂದಿಗೆ ಈ ಹೆಚ್ಚಳ ಮಾಡಲಾಗಿದೆಯೇ ಹೊರತು ಗ್ರಾಹಕರಿಗೆ ಹಳೆದ ದರದಲ್ಲೇ ಹೊಸ ಮೆನು ಮತ್ತು ಇನ್ನಷ್ಟು ಉತ್ತಮ ಆಹಾರ ದೊರಕಲಿದೆ ಎಂದು ವಿವರ ನೀಡಿದೆ.

Leave a Reply

Your email address will not be published. Required fields are marked *

Back to top button