ಅಧಿಕಾರಿ ಕಾರ್ಯವೈಖರಿ

ಐಎಎಸ್ ಅಧಿಕಾರಿ ಐ.ಎನ್.ಎಸ್. ಪ್ರಸಾದ್ ನಿವೃತ್ತಿ |13 ಬಜೆಟ್’ಗಳನ್ನು ನಿರ್ವಹಿಸಿದ್ದ ಹಿರಿಯ ಅಧಿಕಾರಿ 

ಬೆಂಗಳೂರು: ಈ ಹಿಂದಿನ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಐ.ಎಸ್.ಎನ್. ಪ್ರಸಾದ್ ಶುಕ್ರವಾರ ನಿವೃತ್ತಿಯಾಗಿದ್ದಾರೆ.

ಇದುವರೆಗೆ 13 ಬಜೆಟ್’ಗಳಿಗಾಗಿ ಕೆಲಸ ಮಾಡಿರುವ ಇವರು, 37 ವರ್ಷಗಳ ಸಾರ್ಥಕ ಸೇವೆಯಿಂದ ನಿವೃತ್ತಿಗೊಂಡಿದ್ದಾರೆ. ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಸಲಿದ್ದು, ಇದರ ಹಿಂದೆಯೂ ಐ.ಎನ್.ಎಸ್. ಪ್ರಸಾದ್ ಕೆಲಸ ನಿರ್ವಹಿಸಿದ್ದಾರೆ. ಇವರು 1986ನೇ ಬ್ಯಾಚ್ ಐ.ಎ.ಎಸ್. ಅಧಿಕಾರಿ.

ಕೋವಿಡ್ ನಂತಹ ಸಾಂಕ್ರಾಮಿಕ ಕಾಲಘಟ್ಟದಲ್ಲಿ ತುರ್ತು ಯೋಜನೆಗಳನ್ನು ರೂಪಿಸಿದ್ದ ಅವರು, ಆಯಾ ಅವಧಿಯ ಮುಖ್ಯಮಂತ್ರಿಗಳ ವಿಶ್ವಾಸ ಗಳಿಸಿದ್ದರು. ಇನ್ನು ಒಂದು ವಾರದಲ್ಲಿ ಮಂಡನೆಯಾಗಲಿರುವ ಬಜೆಟ್ ಹಿಂದೆಯೂ ಪ್ರಸಾದ್ ಅವರ ಪಾತ್ರವಿದ್ದು, ಇದು ಬಹಳ ಸವಾಲಿನ ಬಜೆಟ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಐದು ಗ್ಯಾರೆಂಟಿಗಳನ್ನು ಪೂರೈಸಲು ಸರ್ಕಾರಕ್ಕೆ ಸುಮಾರು 50 ಸಾವಿರ ಕೋಟಿ ರೂ.ನ ಅಗತ್ಯವಿದೆ. ಬಸವರಾಜ್ ಬೊಮ್ಮಾಯಿ ಮಂಡಿಸಿದ್ದ 3.09 ಲಕ್ಷ ಕೋಟಿ ರೂ.ನ ಬಜೆಟಿಗಿಂತಲೂ ಇದು ಶೇ. 8ರಷ್ಟು ಹೆಚ್ಚಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ.

ಪ್ರಸಾದ್ ಅವರ ಹುದ್ದೆಗೆ 1991ರ ಬ್ಯಾಚಿನ ಮತ್ತೊಬ್ಬ ಚಾಣಾಕ್ಷ ಅಧಿಕಾರಿ ಎಲ್ಕೆ ಅತೀಕ್ ಅವರನ್ನು ನೇಮಿಸಲಾಗಿದೆ. ಅತೀಕ್ ಅವರು ಪಿಎಂಒ ಮತ್ತು ವಿಶ್ವಬ್ಯಾಂಕಿನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Leave a Reply

Your email address will not be published. Required fields are marked *

Back to top button