Breaking Newsಕರ್ನಾಟಕ ರಾಜಕೀಯಶಾಸಕ ವಾರ್ತೆ

ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ| ಜನರಿಗೆ ಏನ್‌ ಗ್ಯಾರಂಟಿ ಕೊಟ್ಟಿದ್ದೀರಿ ? ಜನರ ಮುಂದೆ ರಿಪೋರ್ಟ್‌ ಕಾರ್ಡ್‌ ಇಡಿ, ಹೈಕಮಾಂಡ್‌ ಮುಂದೆ ಅಲ್ಲ..

ಬೆಂಗಳೂರು: ವಿದೇಶ ಪ್ರವಾಸದಿಂದ ಮರಳಿರುವ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ವಿದೇಶ ಪ್ರವಾಸಕ್ಕೂ ಮೊದಲು ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಪೆನ್‌ಡ್ರೈವ್‌, ರಾಜ್ಯ ಸರ್ಕಾರದ ವರ್ಗಾವಣೆ ದಂಧೆ ಆರೋಪ ಮುಂತಾದವುಗಳ ಮೂಲಕ ಸುದ್ದಿಯಲ್ಲಿದ್ದರು. ವಿದೇಶದಲ್ಲಿದ್ದರೂ ರಾಜ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರ ಮುಂದೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಇಲ್ಲಿ ಮಾತ್ರ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ನವರು ಲಂಚಗುಳಿತನದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದ್ದಾರೆ.

ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು, ಪೊಲೀಸ್ ಅಧಿಕಾರಿಗಳನ್ನು ಯಾವ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಎಲ್ಲಾ ಮಾಹಿತಿ ಕಲೆಹಾಕಿದ್ದೇನೆ ಎಂದು ಹೇಳಿದರು.

ಕಳೆದ ವರ್ಷ 40 ಸಾವಿರ ಸರ್ಕಾರ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ತೆರಿಗೆಯನ್ನು ಜನತೆ ತುಂಬಿದ್ದಾರೆ. 72 ಸಾವಿರ ಗುರಿ ಮೀರಿದೆ. ಇವತ್ತು ಹಣದ ಕೊರತೆ ಇಲ್ಲ. ಆದ್ರೆ ನಾಟಕ ನಡೀತಿದೆ. ಕೊರತೆ ಮುಂಗಡಪತ್ರ ಯಾಕೆ ಮಾಡಿದ್ದಾರೆ ಗೊತ್ತಿಲ್ಲ. ಒಂದು ಸಾಲ ಹೆಚ್ಚಿಸಿದ್ದಾರೆ. ಇನ್ನೊಂದು ಕಡೆ ತೆರಿಗೆ ಹೆಚ್ಚಳ ಮಾಡಿ ಅಲ್ಲೂ ಆದಾಯ ಸಂಗ್ರಹ ಮಾಡ್ತಿವಿ ಅಂತಿದ್ದಾರೆ ಎಂದು ಹೇಳಿದ್ದಾರೆ.

ನಾನು ಸಹ 14 ತಿಂಗಳು ಸರ್ಕಾರ ನಡೆದಿದ್ದಾಗ ರೈತರ ಸಾಲ ಮನ್ನಾ ಮಾಡಲು 25 ಸಾವಿರ ಕೋಟಿ ಕೊಟ್ಟಿದ್ದೆ. ಅಭಿವೃದ್ಧಿ ಎಲ್ಲೂ ನಿಂತಿರಲಿಲ್ಲ. ಕಾಂಗ್ರೆಸ್‌ ನಾಯಕರು ಪದೇ ಪದೇ ನನ್ನ ಕುತ್ತಿಗೆ ಹಿಡಿದದ್ದೂ ಅಷ್ಟೇ. ಅವರ ಕಾರ್ಯಕ್ರಮಕ್ಕೆ ಒಂದು ರೂಪಾಯಿ ಸಹ ಕಡಿಮೆ ಆಗಬಾರದು ಅಂತ ಎಂದು ವಿವರಿಸಿದ್ದಾರೆ.

ಎಲ್ಲಾ ಅಶಿಸ್ತಿನ ಆಳ್ವಿಕೆ ಮಾಡುತ್ತಾ ಬಂದವರು ನೀವು. ಅದೆಲ್ಲವನ್ನೂ ನಾನು ಸರಿಪಡಿಸುವ ಕೆಲಸವನ್ನು 14 ತಿಂಗಳಲ್ಲಿ ಮಾಡಿದೆ. ಇಂದು ರಿಪೋರ್ಟ್‌ ಕಾರ್ಡ್‌ ಇಡಬೇಕಾಗಿರುವು ರಾಜ್ಯದ ಜನತೆಯ ಮುಂದೆ. ಹೈಕಮಾಂಡ್‌ ಮುಂದೆ ಅಲ್ಲ. ಮತ ಹಾಕಿದವರ ಮುಂದೆ ಇಡಬೇಕು. ಎಲ್ಲಾ ಗೊಂದಲ ಸೃಷ್ಟಿಸಿದ್ದಾರೆ. ಜನರಿಗೆ ಏನ್‌ ಗ್ಯಾರಂಟಿ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಶಾಸಕರೇ ನಮಗೆ ಅಭಿವೃದ್ಧಿಗೆ ಹಣ ಇಲ್ಲ ಅಂತ ಆರೋಪ ಮಾಡ್ತಾ ಇದ್ದಾರೆ. ನನಗೆ ಆಶ್ಚರ್ಯ ಆಗ್ತಾ ಇರೋದು. ನಮ್ಮ ಖಜಾನೆ ಎಲ್ಲಿ ಖಾಲಿಯಾಯ್ತು ಅಂತ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button