Breaking Newsಮುಖ್ಯಮಂತ್ರಿ ನ್ಯೂಸ್

ನುಡಿದಂತೆ ನಡೆಯುವ ಬದ್ದತೆ ತೋರಿಸಿದ್ದೇವೆ: ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ರಾಹುಲ್‌ ಗಾಂಧಿ

ಮೈಸೂರು: ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಮಾತನಾಡಿದರು.

ಚುನಾವಣೆಗೂ ಮೊದಲು 5 ಗ್ಯಾರಂಟಿ ವಾಗ್ದಾನ ನೀಡಿದ್ದೆವು. ಕೊಟ್ಟ ಮಾತನ್ನ ಈಡೇರಿಸಿದ್ದೇವೆ. ನುಡಿದಂತೆ ನಡೆಯುವ ಬದ್ದತೆ ತೋರಿಸಿದ್ದೇವೆ. ಇಂದು ಮಹಿಳೆಯರ ಬ್ಯಾಂಕ್‌ ಖಾತೆಗೆ 2000 ರೂ. ಹಣ ಹಾಕಿದ್ದೇವೆ ಎಂದು ಹೇಳಿದರು.

ಇನ್ಮೇಲೆ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಬರಲಿದೆ. ನುಡಿದಂತೆ ನಡೆದ ಸರ್ಕಾರ ಇದ್ರೆ ಅದು ನಮ್ಮದು. ನೇರವಾಗಿ ಅವರ ಖಾತೆಗೆ ಜಮಾ ಮಾಡಿದ್ದೇವೆ. ಸರ್ಕಾರಿ ಬಸ್‌ ನಲ್ಲಿ ಈಗ ಮಹಿಳೆಯರು ಹಣ ಕೊಡುವಂತಿಲ್ಲ. ಅನ್ನಭಾಗ್ಯ ಯೋಜನೆಯನ್ನ ಜಾರಿಗೆ ತಂದಿದ್ದೇವೆ. ಯುವನಿಧಿ ಬಿಟ್ಟು ಎಲ್ಲ ಗ್ಯಾರಂಟಿ ಜಾರಿಯಾಗಿದೆ. ಶೀಘ್ರವೇ ಯುವನಿಧಿ ಸಹ ಜಾರಿಗೆ ತರುತ್ತೇವೆ ಎಂದರು.

ಪದವೀಧರರಿಗೆ ತಿಂಗಳಿಗೆ 3000ರೂ. ಡಿಪ್ಲೊಮಾ ಪಾಸ್‌ ಆದವರಿಗೆ 1,500 ರೂ. ಸಿಗಲಿದೆ. ಅನ್ನಭಾಗ್ಯ ಯೋಜನೆಯಡಿ ಅರ್ಹರಿಗೆ 10ಕೆಜಿ ಅಕ್ಕಿ. ಗೃಹಜ್ಯೋತಿಯಡಿ ಪ್ರತಿ ಕುಟುಂಬಕ್ಕೆ 200 ಯೂನಿಟ್‌ ವಿದ್ಯುತ್ ಫ್ರೀ. ‌ 4 ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿವೆ. 3 ಗ್ಯಾರಂಟಿಗಳು ಮಹಿಳಾ ಕೇಂದ್ರಿತವಾಗಿವೆ. ಗ್ಯಾರಂಟಿ ಯೋಜನೆ ಹಿಂದೆ ಆಳವಾದ ಚಿಂತನೆ ಇದೆ ಎಂದರು.

ಸದೃಢ ಬೇರು ಇಲ್ಲದೆ ಮರ ನಿಲ್ಲಲ್ಲ. ಕುಟುಂಬದ ಬೇರು ಗೃಹಿಣಿ. ಹೀಗಾಗಿ ಮಹಿಳೆಯರಿಗೆ ಗ್ಯಾರಂಟಿ ನೆರವು ನೀಡಲಾಗುತ್ತಿದೆ. ಕರ್ನಾಟಕ ಅಭಿವೃದ್ದಿಗೆ ಭದ್ರ ಬುನಾದಿ ಹಾಕುತ್ತಿದ್ದೇವೆ. ಭಾರತ್‌ ಜೋಡೋದಲ್ಲಿ ನನಗೆ ಸಾಕಷ್ಟು ಅನುಭವಕ್ಕೆ ಬಂದಿದೆ. ಬೆಲೆ ಏರಿಕೆ ಪ್ರತಿಯೊಬ್ಬರ ಮೇಲೆ ಬರೆ ಹಾಕಿತ್ತು. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ದರ ಏರಿತ್ತು. ಹೆಣ್ಣು ಮಕ್ಕಳು ಬೆಲೆ ಏರಿಕೆ ಹೊರೆ ಇಳಿಸಿ ಎಂದಿದ್ರು ಎಂದರು.

ಭಾರತ್‌ ಜೋಡೋ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರು ಬೆಂಬಲ ನೀಡಿದ್ರು. ಕರ್ನಾಟಕದಲ್ಲಿ 600 ಕಿ.ಮೀ ಪಾದಯಾತ್ರೆ ಮಾಡಿ ಸಮಾಲೋಚನೆ ಮಾಡಿದ್ದೇನೆ. ಮಹಿಳೆಯರೊಂದಿಗೆ ಸಂವಾದ ನಡೆಸಿದ್ದೇನೆ. ಸರ್ಕಾರ ಇಂದು 100 ದಿನಗಳನ್ನು ಪೂರೈಸಿದೆ. ಇದರಿಂದ ಅತೀವ ಸಂತಸವಾಗಿದೆ. ಕರ್ನಾಟಕ ರಾಜ್ಯದ ಜನರಿಗಾಗಿ ಐತಿಹಾಸಿಕ ಯೋಜನೆ ಜಾರಿ ಮಾಡಲಾಗಿದೆ.

ಒಂದಿಬ್ಬರು ಮಾತ್ರ ಕೇಂದ್ರಕ್ಕೆ ಹತ್ತಿರವಾಗಿದ್ದಾರೆ. ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದೆ. ಕೇಂದ್ರದ ಸರ್ಕಾರ ಕೋಟ್ಯಧಿಪತಿಗಳ ಪರ ಕೆಲಸ ಮಾಡುತ್ತೆ. ನಾವು ಬಡವರು, ಮಹಿಳೆಯರ ಪರ ಇದ್ದೇವೆ. ಯಾವುದೇ ಧರ್ಮ, ಜಾತಿಗೆ ಸರ್ಕಾರ ಸೀಮಿತವಲ್ಲ. ಕರ್ನಾಟಕದಲ್ಲಿ ನಾವು ಎಲ್ಲರಿಗೂ ಯೋಜನೆ ತಂದಿದ್ದೇವೆ. ಇಡೀ ದೇಶಕ್ಕೆ ಕರ್ನಾಟಕದ ಗ್ಯಾರಂಟಿಯೇ ಮಾದರಿ. ಗ್ಯಾರಂಟಿ ಘೋಷಿಸಿದಾಗ ಕೇಂದ್ರ ಸರ್ಕಾರ ಅಸಾಧ್ಯ ಎಂದಿತ್ತು. ನಾವು ಗ್ಯಾರಂಟಿ ಜಾರಿ ಮಾಡಿ ತೋರಿಸಿದ್ದೇವೆ.

ಕರ್ನಾಟಕದ ಯೋಜನೆಗಳನ್ನ ದೇಶಪೂರ್ತಿ ಕೊಡ್ತೇವೆ. 5 ಗ್ಯಾರಂಟಿ ಯೋಜನೆಗಳು ದಿಕ್ಸೂಚಿಯಾಗಿವೆ. ಇಡೀ ದೇಶದಲ್ಲಿ ಈ ಯೋಜನೆಯನ್ನ ಜಾರಿ ಮಾಡ್ತೇವೆ.

ರಾಜ್ಯದ ಅಭಿವೃದ್ಧಿ ಮಹಿಳೆಯರಿಂದ ಆಗಿದೆ. ನಾವು ಯಾವತ್ತೂ ನಿಮಗೆ ಸುಳ್ಳು ಆಶ್ವಾಸನೆ ನೀಡಲ್ಲ. ಪಕ್ಷದ ನಾಯಕರನ್ನು ಮುಕ್ತವಾಗಿ ಭೇಟಿಯಾಗಿ ಮಾತನಾಡಬಹುದು. ಖುದ್ದು ಪ್ರಧಾನಿ ಕಾಂಗ್ರೆಸ್‌ ಸತ್ಯ ಹೇಳಲ್ಲ ಅಂದಿದ್ರು. ಸತ್ಯ ನಿಮ್ಮ ಮುಂದೆ ನಿಂತಿದೆ.

ಇಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ 2000 ಸಿಕ್ತಿದೆ. ಉಚಿತ ಬಸ್‌ ಪ್ರಯಾಣ, ಉಚಿತ ವಿದ್ಯುತ್, ಉಚಿತ ಅಕ್ಕಿ ಯೋಜನೆ ಜಾರಿಗೆ ತಂದಿದ್ದೇವೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ. ಘೋಷಿಸಿದಂತೆ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.

Leave a Reply

Your email address will not be published. Required fields are marked *

Back to top button