Breaking Newsಶಾಸಕ ವಾರ್ತೆ

ಗುತ್ತಿಗೆದಾರರಿಗೆ ನ್ಯಾಯ ನೀಡಲು ರಾಜ್ಯಪಾಲರ ಮಧ್ಯಪ್ರವೇಶ- ಗೋಪಾಲಯ್ಯ ಮನವಿ


ಬೆಂಗಳೂರು: ಬಿಲ್ ತಡೆ ಹಿಡಿದ ವಿಷಯದಲ್ಲಿ ಗೌರವಾನ್ವಿತ ರಾಜ್ಯಪಾಲರು ಮಧ್ಯಪ್ರವೇಶಿಸಿ ಗುತ್ತಿಗೆದಾರರಿಗೆ ನ್ಯಾಯ ಕೊಡಬೇಕು ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ಅವರು ಒತ್ತಾಯಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪಣ್ಣನವರು ಪ್ರಧಾನಿಗೂ ಮನವಿ ನೀಡಿದ್ದರು. ಅವರು ಗುತ್ತಿಗೆ ಕೆಲಸ ಮಾಡುತ್ತಿದ್ದರೆ 400- 500 ಜನರ ಪರವಾಗಿ ಇರುತ್ತಾರಾ? ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರಾ? ಎಂದು ಕೇಳಿದರು.


224 ಜನ ಶಾಸಕರಿದ್ದೀವಿ. ನೀವು ಯಾರಿಗೆ ಹಣ ಕೊಟ್ಟಿದ್ದೀರೆಂದು ಬಹಿರಂಗಪಡಿಸಿ ಎಂದು ಸವಾಲೆಸೆದರು. 40 ಶೇಕಡಾವನ್ನು ಯಾರಿಗೆ ಕೊಟ್ಟಿದ್ದೀರೆಂದು ತಿಳಿಸಿ ಎಂದು ಒತ್ತಾಯಿಸಿದರು. ಇಲ್ಲವಾದರೆ ರಾಜ್ಯದ ಜನರ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.
ಕೆಂಪಣ್ಣನವರು ಕಾಂಗ್ರೆಸ್‍ನಿಂದ ಕಿಕ್ ಬ್ಯಾಕ್ ಪಡೆದುದು ಸ್ಪಷ್ಟವಾಗುತ್ತಿದೆ. ಗುತ್ತಿಗೆದಾರರ ಕುಟುಂಬ ನೇಣು ಹಾಕಿಕೊಳ್ಳುವ ಸ್ಥಿತಿ ಬಂದಿದೆ. ನಿನ್ನೆ ಮೃತ ಗೌತಂ ಕಂಟ್ರಾಕ್ಟರ್ ಕುಟುಂಬಕ್ಕೆ ಸೇರಿದವರು ಎಂದು ಆರಂಭದಲ್ಲಿ ತಿಳಿಸಲಾಗಿತ್ತು ಎಂದರಲ್ಲದೆ, ತಕ್ಷಣ ಹಣ ಬಿಡುಗಡೆ ಮಾಡಿ. ಅನಾಹುತಗಳಿಗೆ ಅವಕಾಶ ಕೊಡದಿರಿ ಎಂದು ಒತ್ತಾಯ ಮಾಡಿದರು.


ಕೇಂದ್ರದ ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ. ರಾಜ್ಯದ ಮೇಲೆ ಹಿಡಿತ ಇಲ್ಲವಾಗಿದೆ ಎಂದು ಆರೋಪಿಸಿದರು. ಗುತ್ತಿಗೆದಾರರ ಹಣ ಕೂಡಲೇ ಬಿಡುಗಡೆ ಮಾಡಿ ಎಂದ ಅವರು, ಡಿಸಿಎಂ ತಾಂತ್ರಿಕ ಸಲಹೆಗಾರ ಕೆ.ಟಿ.ನಾಗರಾಜ್ ಹಿನ್ನೆಲೆಯನ್ನೂ ಕೆದಕಬೇಕಲ್ಲವೇ? 26 ಕಂಡಿಷನ್ ಹಾಕಿ ಕಿರುಕುಳ ಕೊಡುವುದನ್ನು ಗಮನಿಸಿ ಎಂದು ತಿಳಿಸಿದರು. ರಾಜ್ಯದ ಲೂಟಿ ಹೊಡೆಯಲು ಈ ನೇಮಕ ಆಗಿದೆಯೇ ಎಂದು ನೇರವಾಗಿ ಪ್ರಶ್ನಿಸಿದರು.


ಕಳೆದ 85 ದಿನಗಳಿಂದ ಕಾಂಗ್ರೆಸ್ ಸರಕಾರವು ಒಂದಲ್ಲ ಒಂದು ದುರ್ಘಟನೆಗಳಿಗೆ ನೇರ ಹೊಣೆಯಾಗಿದೆ. ಗುತ್ತಿಗೆದಾರರು ರಾಜ್ಯಪಾಲರಿಗೆ ನೇರ ದೂರು ಕೊಟ್ಟಿರಲಿಲ್ಲ. ಉಪ ಮುಖ್ಯಮಂತ್ರಿಗಳು ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಡಿಸಿಎಂ ಜೊತೆ ಕೈ ಜೋಡಿಸಿದ್ದಾರಾ ಎಂದು ಕೇಳಿದರು.
ಅಜ್ಜಯ್ಯ ದೇವರನ್ನು ನಂಬಿದ್ದೀರಾ? ಆಣೆÉ ಮಾಡಿ ಎಂದು ಆಗ್ರಹಿಸಿದರು. ಕಂಟ್ರಾಕ್ಟರ್‍ಗಳು ಬೀದಿ ಬೀದಿ ಸುತ್ತುತ್ತಿದ್ದಾರೆ. ನಮ್ಮ ನಾಯಕರನ್ನೂ ಭೇಟಿ ಮಾಡಿದ್ದಾರೆ. ಕೇಂದ್ರದ ನಾಯಕರಿಗೆ ಹಣ ಸಂಗ್ರಹಿಸಲು ಹೊರಟಿದ್ದಾರೆಯೇ ಎಂದು ಕೇಳಿದರು.


300ಕ್ಕಿಂತ ಹೆಚ್ಚು ಗುತ್ತಿಗೆದಾರರು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದು, ಬಿಲ್ ತಡೆಹಿಡಿದುದು ಮತ್ತು ಲಂಚ ಕೇಳಿದ್ದು ನಾಚಿಗೆಗೇಡಿನ ಕೆಲಸವಲ್ಲವೇ? ಗುತ್ತಿಗೆದಾರರು ಕೆಲಸ ನಿಲ್ಲಿಸಿದರೆ ಲಕ್ಷಗಟ್ಟಲೆ ನಿರುದ್ಯೋಗ ಸೃಷ್ಟಿ ಆಗುವುದು ನಿಮ್ಮ ಗಮನಕ್ಕೆ ಬರಲಿಲ್ಲವೇ? ರಾಜ್ಯ ಸರಕಾರವು ಬೆಂಗಳೂರಿಗೆ ಒಂದು ನೀತಿ, ಇತರೆಡೆಗೆ ಇನ್ನೊಂದು ನೀತಿ ಅನುಸರಿಸುತ್ತಿದ್ದು, ರಾಜ್ಯದಲ್ಲಿ ಒಂದು ಸರಕಾರ ಇದೆಯೇ? ಎರಡು ಸರಕಾರಗಳಿವೆಯೇ ಎಂದು ಪ್ರಶ್ನಿಸಿದರು.


ನಾನು, ನನ್ನ ಪತ್ನಿ, ಕುಟುಂಬ ಬಿಜೆಪಿ ದೃಢಪಡಿಸಲು ಶ್ರಮಿಸುತ್ತೇವೆÉ. ಬದುಕಿರುವ ವರೆಗೂ ಈ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದರು. ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟಿದೆ. ಮೋದಿಜಿ ಅವರ ಆಡಳಿತ ಇನ್ನೂ ಮುಂದುವರೆಯಬೇಕೆಂಬ ಆಶಯ ನನ್ನದು. ಮೋದಿಜಿ ಅವರು ವಿಶ್ವನಾಯಕರಾಗಿದ್ದಾರೆ. ಅವರೇ 2024ರಲ್ಲೂ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದು ನುಡಿದರು. ಮತ್ತೆ ಇದೇ ಪ್ರಶ್ನೆ ಕೇಳದಿರಿ ಎಂದು ಮನವಿ ಮಾಡಿದರು.


ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ|| ಸಿ.ಎನ್. ಅಶ್ವತ್ಥನಾರಾಯಣ್, ಬಿಡಿಎ ಮಾಜಿ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್, ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Back to top button