Breaking Newsಸಚಿವರ ಕಚೇರಿಯಿಂದ

ಸಿಲಿಂಡರ್‌ ಬೆಲೆ ಇಳಿಕೆ ಚುನಾವಣಾ ಗಿಮಿಕ್‌. ಎಲೆಕ್ಷನ್‌ ಮುಗಿದ ಮೇಲೆ ದರ ಏರಿಸುತ್ತಾರೆ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟೀಕೆ

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರ್ಕಾರ 200 ರೂಪಾಯಿ ಇಳಿಕೆ ಮಾಡಿದೆ. ಇದರ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ. ಇದು ಚುನಾವಣಾ ಗಿಮಿಕ್‌, ಲೋಕಸಭಾ ಚುನಾವಣೆ ಇರುವುದರಿಂದ ಇಳಿಕೆ ಮಾಡಿದ್ದಾರೆ. ಚುನಾವಣೆ ಮುಗಿದ ನಂತರ ಮತ್ತೆ ಏರಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಒತ್ತಡಕ್ಕೆ ಮಣಿದು ಇಳಿಸಿದ್ದಾರೆ: ಡಿ ಕೆ ಶಿವಕುಮಾರ್‌

ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ನರೇಂದ್ರ ಮೋದಿ ಅವರು ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಇಳಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಹೆಣ್ಣು ಮಕ್ಕಳು ಕರ್ನಾಟಕದ ಮಾದರಿ ನೋಡ್ತಿದ್ದಾರೆ. 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಕೊಡಬೇಕು ಅಂತ ಹೇಳಿದ್ದೆವು. ಈಗ ನಾವು 2 ಸಾವಿರ ಕೊಡ್ತಿದ್ದೀವಿ ಎಂದರು. ಆದ್ದರಿಂದ ಒತ್ತಡಕ್ಕೆ ಸಿಲುಕಿ ಕೇವಲ ರೂ. 200 ಇಳಿಸಿದ್ದಾರೆ ಎಂದು ಮೈಸೂರಿನಲ್ಲಿ ಹೇಳಿದರು.

ನಾವು ನಾಲ್ಕು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ಇದು ಕಾಂಗ್ರೆಸ್‌ ಸರ್ಕಾರದ ಹಬ್ಬ. ಮತದಾರರು ಹಬ್ಬ ಆಚರಿಸುವ ಗೃಹಲಕ್ಷ್ಮಿ ಜಾರಿಗೆ ತಂದಿದ್ದೇವೆ. ನೋಡಿ ಕಾಂಗ್ರೆಸ್‌ನವರು ಗ್ಯಾರಂಟಿ ಕೊಡ್ತಿದ್ದಾರೆ. ನೀವೇಕೆ ಕೊಡುವುದಿಲ್ಲ ಎಂದು ಮಹಿಳೆಯರು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದರಿಂದ ಅವರು ಈಗ ಸಿಲಿಂಡರ್‌ ಬೆಲೆ ಇಳಿಕೆ ಮಾಡಿದ್ದಾರೆ. ಕರ್ನಾಟಕದ ಮಾದರಿಯನ್ನು ಪ್ರಧಾನಿಯವರು ಅನುಕರಣೆ ಮಾಡ್ತ ಇದ್ದಾರೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಗೆ ಹೆದರಿ ಅಡುಗೆ ಅನಿಲ ಬೆಲೆಯನ್ನು 200 ರೂಪಾಯಿ ಇಳಿಕೆ ಮಾಡಿದ್ದಾರೆ. ನಮ್ಮ ಯೋಜನೆಗಳಿಗೆ ಹೆದರಿ ಗ್ಯಾಸ್ ಬೆಲೆ ಇಳಿಕೆಯಾಗಿ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇದೆ. ಅದಕ್ಕೆ ಸಬ್ಸಿಡಿ ನೀಡಿದ್ದಾರೆ ಎಂದು ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕೇಂದ್ರ ಸರ್ಕಾರ 4 ವರ್ಷದಿಂದ ಯಾಕೆ ಸಿಲಿಂಡರ್‌ ದರ ಇಳಿಕೆ ಮಾಡಿಲ್ಲ. ಜನರು ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ. ಚುನಾವಣೆ ವೇಳೆ ಗಲಾಟೆ ಮಾಡಿಸೋದು ಬಿಜೆಪಿ ಕೆಲಸ ಎಂದು ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.

ಬಡವರ ಮೇಲೆ ಕಾಳಜಿ ಇದ್ರೆ ಪ್ರತಿ ಸಿಲಿಂಡರ್‌ಗೆ ರೂ. 450 ಮಾಡಲಿ. 450 ಮಾಡಿದ್ರೆ ನಾವು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ. 1200 ರೂಪಾಯಿಗೆ ಏರಿಸಿ 200 ಕಡಿಮೆ ಮಾಡುವುದಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಇದ್ದಷ್ಟು ಮಾಡಲಿ. ಲೋಕಸಭಾ ಚುನಾವಣೆ ಬರುತ್ತಿದೆ. ಆದ್ದರಿಂದ ಸಿಲಿಂಡರ್ ದರ ಇಳಿಕೆ ಮಾಡಿದ್ದಾರೆ. ಚುನಾವಣೆ ಮುಗಿದ ಬಳಿಕ ಮತ್ತೆ ದರ ಏರಿಕೆಯಾಗುತ್ತೆ ಎಂದು ಕಾರವಾರದಲ್ಲಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button