Breaking Newsಸುದ್ದಿ ಸಮಾಚಾರ

ಲಾಲ್‌ ಬಾಗ್ ನಲ್ಲಿ ನಾಳೆಯಿಂದ ಫಲಪುಷ್ಪ ಪ್ರದರ್ಶನ | ಸಸ್ಯಕಾಶಿಯಲ್ಲಿ ಮೈದಳೆಯಲಿದೆ ಕೆಂಗಲ್‌ ಜೀವನ

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ ನಲ್ಲಿ 214 ನೇ ಫಲಪುಷ್ಪ ಪ್ರದರ್ಶನ ಆಗಸ್ಟ್‌ 4 ರಿಂದ 15 ರ ವರೆಗೆ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ, ವಿಧಾನ ಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ಜೀವನ, ಸಾಧನೆ ಕುರಿತಂತೆ ಈ ಪ್ರದರ್ಶನ ನಡೆಯಲಿದೆ. 10 ಲಕ್ಷ ಹೂ ಬಳಸಿ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹ ಸೌಧದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತಿದೆ.

ಆಗಸ್ಟ್ 4ರಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವ ಆಸಕ್ತರಿಗೆ ಲಾಲ್‌ಬಾಗ್‌ನ ಪಶ್ಚಿಮ ಗೇಟ್, ಪೂರ್ವ ಗೇಟ್ ಮತ್ತು ಸೌತ್ ಎಂಡ್ ಸರ್ಕಲ್‌ನಿಂದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ, ಜೆ ಸಿ ರಸ್ತೆ ಬಿಬಿಎಂಪಿ ಸಂಕೀರ್ಣ ಮತ್ತು ಲಾಲ್ ಬಾಗ್ ರಸ್ತೆಯ ಅಲ್ ಅಮೀನ್ ಕಾಲೇಜಿನಲ್ಲಿ ವಾಹನಗಳ ನಿಲುಗಡೆಗೆ ಅವಕಾಶವಿದೆ.

ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಪ್ರದರ್ಶನ ನಡೆಯಲಿದ್ದು, ಪ್ರವೇಶ ದರವನ್ನು ವಾರದ ದಿನಗಳಲ್ಲಿ ವಯಸ್ಕರಿಗೆ ರೂ. 70 ಮತ್ತು ವಾರಾಂತ್ಯದಲ್ಲಿ ರೂ. 80 ನಿಗದಿಪಡಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ರೂ. 30 ನಿಗದಿ ಮಾಡಲಾಗಿದೆ.

Leave a Reply

Your email address will not be published. Required fields are marked *

Back to top button