Breaking Newsಸುದ್ದಿ ಸಮಾಚಾರ

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ – ರುಡ್‌ಸೆಟ್ ಒಪ್ಪಂದ | ಮೂರು ವರ್ಷಗಳ ಕರಾರಿಗೆ ಸಹಿ ಹಾಕಿದ ಡಾ. ಹೆಗ್ಗಡೆ

ಬೆಳ್ತಂಗಡಿ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನ್ಯಾಶನಲ್ ಅಕಾಡೆಮಿ ಆಫ್ ರುಡ್‌ಸೆಟ್ ಮಧ್ಯೆ ಮೂರು ವರ್ಷಗಳ ಅವಧಿಯ ಕರಾರು ಒಪ್ಪಂದ ಪತ್ರಕ್ಕೆ ನವದೆಹಲಿಯಲ್ಲಿ ಶುಕ್ರವಾರ ಸಹಿ ಹಾಕಲಾಯಿತು.

2023ರ ಅಗೋಸ್ತು ಒಂದರಿಂದ 2026ರ ಜುಲೈ 31ರವರೆಗೆ ಕರಾರುಪತ್ರ ಚಾಲ್ತಿಯಲ್ಲಿರುತ್ತದೆ.

ನ್ಯಾಶನಲ್ ಅಕಾಡೆಮಿ ಆಫ್ ರುಡ್‌ಸೆಟ್ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಕರ್ಮ ಝಿಂಪ ಭುಟಿಯಾ ಕರಾರು ಪತ್ರಕ್ಕೆ ಸಹಿ ಹಾಕಿದರು.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್, ನೇಶನಲ್ ಅಕಾಡೆಮಿ ಆಫ್ ರುಡ್‌ಸೆಟ್ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಕೆ.ಎನ್. ಜನಾರ್ದನ್, ಜಂಟಿ ನಿರ್ದೇಶಕರು, ಉಪ ಆಯುಕ್ತ ಶಿವಸೋನಿ, ನವೀನ್ ಕುಮಾರ್, ವಿಶಾಲ್ ಗುಪ್ತಾ ಮತ್ತು ಕಾನೂನು ಸಲಹೆಗಾರ ಲೋಕೇಶ್ ಸುಖ್‌ವಾನಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button