ಸುದ್ದಿ ಸಮಾಚಾರ

ಬೆಂಗಳೂರು‌ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಲಿದ್ದಾರೆ ಜಗತ್ತಿನ 2ನೇ ಅತೀ ಎತ್ತರದ ಪರ್ವತ ಏರಿದ ಡಾ. ಸ್ವರ್ಣಾಂಬಾ ಲೊಕೇಶ್

ಆಫ್ರಿಕಾದ ಕಿಲಿಮಂಜಾರೊ ಪರ್ವತ ಏರಿದ 63ರ ‘ಅಮೆರಿಕನ್ನಡತಿ’ ಇವರು

ಬೆಂಗಳೂರು: ಕಿಲಿಮಂಜಾರೊ ಪರ್ವತಕ್ಕೆ ಆಫ್ರಿಕಾದ ಅತೀ ಎತ್ತರದ ಮತ್ತು ಜಗತ್ತಿನ ಎರಡನೇ ಅತೀ ಎತ್ತರದ ಒಂಟಿ ಪರ್ವತ ಎಂಬ ಖ್ಯಾತಿ. ಇಂತಹ ಪರ್ವತವನ್ನು ತನ್ನ 63ರ ಹರೆಯದಲ್ಲಿ ಏರಿ ಸಾಧನೆ ಮಾಡಿರುವ ಅಮೆರಿಕನ್ನಡತಿ ಡಾ. ಸ್ವರ್ಣಾಂಬಾ ಲೊಕೇಶ್ ಅವರು ಜುಲೈ 27ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ‌ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.


ಕಳೆದ 3 ದಶಕಗಳಿಂದ ಅಮೆರಿಕದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ ಹೆಮ್ಮೆಯ ಕನ್ನಡತಿ, ಮೈಸೂರು ಮೆಡಿಕಲ್‌ ಕಾಲೇಜಿನ ಹಳೆವಿದ್ಯಾರ್ಥಿನಿ. ಇವರು ಹಾಸನದ ಗೊರೂರಿನವರು. ಮಂಡ್ಯದ ಸೊಸೆ. ಇದೀಗ ತಾಯ್ನೆಲಕ್ಕೆ ಆಗಮಿಸಿದ್ದು, ತಮ್ಮ ಸಾಹಸಗಾಥೆಯನ್ನು ಬಿಚ್ಚಿಡಲಿದ್ದಾರೆ.
ಸಮುದ್ರ ಮಟ್ಟದಿಂದ 5,895 ಮೀಟರ್‌ (19,341 ಅಡಿ) ಎತ್ತರಕ್ಕೆ ಚಾಚಿ ನಿಂತಿರುವ ಒಂಟಿ ಪರ್ವತ ಕಿಲಿಮಂಜಾರೊ. ಎವರೆಸ್ಟ್‌ ಜಗತ್ತಿನ ಅತ್ಯಂತ ಎತ್ತರದ ಪರ್ವತ ಇರಬಹುದು, ಕಿಲಿಮಂಜಾರೊ ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ. ಎವರೆಸ್ಟ್‌ಗೆ ಹೋಲಿಸಿದರೆ ಕಿಲಿಮಂಜಾರೊ ಪರ್ವತವನ್ನು ಅಧಿಕ ಸಂಖ್ಯೆಯಲ್ಲಿ ಜನರು ಏರುತ್ತಾರೆ. ದೊಡ್ಡ ಟ್ರೆಕ್ಕಿಂಗ್ ಮಾಡಿದ ಅನುಭವದೊಂದಿಗೆ ವಾಪಸಾಗುತ್ತಾರೆ. ಹೀಗೆ ದೊಡ್ಡ ಸಾಧನೆ ಮಾಡಿ ಕನ್ನಡ ನೆಲಕ್ಕೆ ಕಾಲಿಟ್ಟಿದ್ದಾರೆ ಡಾ.ಸ್ವರ್ಣಾಂಬಾ.

Leave a Reply

Your email address will not be published. Required fields are marked *

Back to top button