Breaking Newsಸುದ್ದಿ ಸಮಾಚಾರ

ಡಾ. ಸಿಎನ್ ಮಂಜುನಾಥ್ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಆರು ತಿಂಗಳು ಮುಂದುವರೆಯಲಿದ್ದಾರೆ!! ಸೇವಾವಧಿ ವಿಸ್ತರಿಸಿದ ಸಿಎಂ ಸಿದ್ದರಾಮಯ್ಯ..

ಬೆಂಗಳೂರು: ದೇಶದಲ್ಲೇ ಕಡಿಮೆ ದರದಲ್ಲಿ ಗುಣಮಟ್ಟದ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಪ್ರಸಿದ್ಧಿಯಾಗಿರುವ ಡಾ.ಸಿ.ಎನ್. ಮಂಜುನಾಥ್‌ ಅವರ ನಿವೃತ್ತಿ ಅವಧಿ ಜುಲೈ ತಿಂಗಳ 19, ಆದರೆ ಈಗ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಮುಂದಿನ ಆರು ತಿಂಗಳ ಕಾಲ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಡಾ.ಸಿ.ಎನ್. ಮಂಜುನಾಥ್‌ ಅವರ ಸೇವಾವಧಿ ಪೂರ್ಣಗೊಂಡ ನಂತರ ಹಲವು ವೈದ್ಯಾಧಿಕಾರಿಗಳಿಂದ ನಿರ್ದೇಶಕರ ಹುದ್ದೆಗೆ ಭಾರಿ ಲಾಭಿ ಉಂಟಾಗುವ ಸಾಧ್ಯತೆಯಿದೆ, ಇದನ್ನು ಕೂಡ ಸರ್ಕಾರ ಪರಿಗಣಿಸಿದೆ ಎನ್ನಲಾಗಿದೆ. ಅಲ್ಲದೇ ಕಲಬುರಗಿಯಲ್ಲಿ ಹೊಸ ಹೃದ್ರೋಗ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಅಲ್ಲಿನ‌ ಮೇಲ್ವಿಚಾರಣೆ ಕೂಡ ಸಿ ಎನ್‌ ಮಂಜುನಾಥ್ ಅವರಿಗೆ‌ ಜವಾಬ್ದಾರಿ ವಹಿಸಿರುದರಿಂದ , ಕಾಮಗಾರಿ ಮುಗಿಯುವ ವರೆಗೂ ಡಾ. ಮಂಜುನಾಥ್ ಅವರನ್ನೇ ನಿರ್ದೇಶಕರಾಗಿ ಮುಂದುವರೆಸಲು ಮುಂದಾಗಿದೆ. ವಿಶೇಷತೆ ಏನೆಂದರೆ ಅವರ ಉದ್ಯೋಗ ಅವಧಿ ಎರಡು ವರ್ಷಗಳ ಹಿಂದೆಯೇ ಮುಗಿದಿತ್ತು ಆದರೆ ಈ ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಕೂಡ ಡಾ.ಸಿ.ಎನ್. ಮಂಜುನಾಥ್‌ ಅವರ ಸೇವಾವಧಿ ವಿಸ್ತರಣೆ ಮಾಡಿತ್ತು. ಇದರಿಂದ ಪ್ರಸ್ತುತ ಸೇವಾವಧಿ ವಿಸ್ತರಣೆಯಲ್ಲಿ ಸೇವೆ ಮಾಡುತ್ತಿರುವ ಡಾ. ಮಂಜುನಾಥ್‌ ಅವರಿಗೆ ಮತ್ತಷ್ಟು ತಿಂಗಳ ಕಾಲ ನಿರ್ದೇಶಕರಾಗಿ ಹೃದ್ರೋಗಿಗಳ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಹೃದ್ರೋಗ ಸಮಸ್ಯೆ ಎಂದರೆ ತಕ್ಷಣ ನೆನಪಾಗುವುದು ಜಯದೇವ ಆಸ್ಪತ್ರೆ ಮತ್ತು ಡಾ. ಸಿಎನ್ ಮಂಜುನಾಥ್ ಎನ್ನುವಷ್ಟರ ಮಟ್ಟಿಗೆ ಜನರಿಗೆ ಅವರ ಸೇವೆ ತಲುಪಿದೆ ಎನ್ನಬಹುದು. ಡಾ. ಸಿಎನ್ ಮಂಜುನಾಥ್ ಅವರು ಮಾಜಿ ಪ್ರಧಾನಿ ದೇವೆಗೌಡರ ಅಳಿಯ ಎನ್ನುವುದು ಗೌಡರ ಕುಟುಂಬಕ್ಕೆ ಸಹ ಪ್ರೌಢಿಮೆಯಾಗಿದೆ ಎನ್ನಬಹುದು.

Leave a Reply

Your email address will not be published. Required fields are marked *

Back to top button