Breaking Newsಸಚಿವರ ಕಚೇರಿಯಿಂದ

ನೊಣವಿನಕೆರೆ ಮಠದ ಧರ್ಮಸಭೆಯಲ್ಲಿ ಪಾಲ್ಗೊಂಡ ಡಿಸಿಎಂ ಡಿ.ಕೆ.ಶಿವಕುಮಾರ್

ತುಮಕೂರು: ಮಾನವ ಧರ್ಮ, ಮಾನವೀಯತೆ ದೊಡ್ಡದು ಎಂದು ಹಿರಿಯರು ಹೇಳುತ್ತಾರೆ. ಅದರಂತೆ ಈ ಮಾನವ ಧರ್ಮವನ್ನು ಅರ್ಥಪೂರ್ವಾಗಿ ಕಳೆಯಬೇಕು. ಯಾರು ಜಾತಿ, ಧರ್ಮಗಳ ಎಲ್ಲೇ ಮೀರಿ ಜನರ ಸೇವೆಗೆ ಮುಂದಾಗುವರೊ ಅವರು ಬೆಳೆಯುತ್ತಾರೆ.

ನೊಣವಿನಕೆರೆಯ ಶ್ರೀಗಳ ಆಶೀರ್ವಾದ ಇದ್ದ ಕಾರಣ ಇಂದು ನಾನು ಜನಸೇವೆ ಮಾಡಲು ಅವಕಾಶ ಒದಗಿ ಬಂದಿದೆ. ರಾಮನ ತಂದೆ ದಶರಥರ ದೇವಸ್ಥಾನವಿಲ್ಲ, ರಾಮನ ದೇವಸ್ಥಾನಕ್ಕಿಂತಲೂ ಭಕ್ತ ಹನುಮಂತನ ದೇವಸ್ಥಾನ ಎಲ್ಲೆಲ್ಲೂ ಇದೆ. ಏಕೆಂದರೆ ಸ್ವಾಮಿ ನಿಷ್ಠೆ, ಸಮಾಜಕ್ಕೆ ಒಳ್ಳೆಯದು ಮಾಡುವ ಸೇವಕನಾದ ಕಾರಣ ಜನ ಪ್ರೀತಿಸುತ್ತಾರೆ. ಯಾರು ಜನರ ಸೇವೆ ಮಾಡುತ್ತಾರೆ ಅವರನ್ನು ಸಮಾಜ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಇದಕ್ಕೆ ಆಂಜನೇಯನೇ ಸಾಕ್ಷಿ.

ದೇವರು ವರ, ಶಾಪ ಎರಡೂ ನೀಡುವುದಿಲ್ಲ ಬದಲಾಗಿ ಅವಕಾಶ ನೀಡುತ್ತಾನೆ. ನಾವು ಆ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಸೇವೆ ಮಾಡುವುದರಿಂದ ದೇವರು ಸಂತೃಪ್ತಿಗೊಳ್ಳುತ್ತಾನೆ.

ನಾನು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ನಂತರ ಅನೇಕ ಕಾರ್ಯಕ್ರಮಗಳ ಒತ್ತಡ ಇದ್ದರೂ 20 ವರ್ಷಗಳಿಂದ ಈ ಮಠದ ಮೇಲೆ ಇರುವ ಭಕ್ತಿ, ಪ್ರೀತಿಯಿಂದ ಇಲ್ಲಿಗೆ ಬರುತ್ತಿದ್ದೇನೆ.

ನಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಅಜ್ಜನ ಕೃಪೆಗೆ ಒಳಗಾಗಿದ್ದಾರೆ, ಹಿರಿಯರ ಮಾತಿನಂತೆ ಮನೆ ಹುಷಾರು- ಮಠ ಹುಷಾರು ಎನ್ನುವಂತೆ ಶ್ರೀ ಮಠದ ಭಕ್ತರು ಈ ಮಠವನ್ನು ನೂರಾರು ವರ್ಷಗಳ ಕಾಲ ಮುನ್ನಡೆಸಿಕೊಂಡು ಹೋಗಬೇಕು.

ಧರ್ಮಗಳು ಹಲವಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾರರು ಭಕ್ತಿಯೊಂದೆ, ಕರ್ಮಯಾವುದಾದರೂ ನಿಷ್ಟೆಯೊಂದೆ, ದೇವನೊಬ್ಬ ನಾಮ ಹಲವು.

ಯಾರ್ಯಾರು ಪಕ್ಷ,ಜಾತಿ, ಧರ್ಮಗಳನ್ನು ಬಿಟ್ಟು ಸಮಾಜದ ಒಳಿತಿಗೆ ಕೆಲಸ ಮಾಡುತ್ತಾರೋ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತದೆ.

ನೀರಿನ ಸಮಸ್ಯೆ ಶೀಘ್ರ ಪರಿಹಾರ:

ತಿಪಟೂರಿನ ಶಾಸಕರಾದ ಷಡಾಕ್ಷರಿ ಅವರಿಗೆ ಶಕ್ತಿ ತುಂಬಿದ್ದೀರಿ, ಅವರು ಸಹ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನ್ನ ಬಳಿ ಅನೇಕ ಸಲ ಬಂದು ಭೇಟಿ ಮಾಡಿ ಮಾತನಾಡಿದ್ದಾರೆ. ಶೀಘ್ರದಲ್ಲೇ ನೀರಿನ, ರೈತರ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ತಮ್ಮಯ್ಯ ದೊಡ್ಡ ವಿಕೆಟ್ ತೆಗೆದಿದ್ದಾರೆ:

ಚಿಕ್ಕಮಗಳೂರು ಶಾಸಕರಾದ ಎಚ್.ಡಿ.ತಮ್ಮಯ್ಯ ಅವರು ಹ್ಯಾಟ್ರಿಕ್ ಹೀರೋ ಇದ್ದಂತೆ, ಈ ಬಾರಿ ತಮ್ಮ ಕ್ಷೇತ್ರದಲ್ಲಿ ದೊಡ್ಡ ವಿಕೆಟ್ ಉರುಳಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರವನ್ನು ಅತ್ಯುತ್ತಮ ಕ್ಷೇತ್ರ ಮಾಡುವ ಆಲೋಚನೆ ಇಟ್ಟುಕೊಂಡು ನನ್ನಬಳಿ ಸಾಕಷ್ಟು ಭಾರಿ ಚರ್ಚೆ ಮಾಡಿದ್ದಾರೆ ಎಂದರು.

Leave a Reply

Your email address will not be published. Required fields are marked *

Back to top button