Breaking Newsಕರ್ನಾಟಕ ರಾಜಕೀಯ

ದಸರಾ ಗಜಪಡೆಗೆ ಪೇಜಾವರ ಶ್ರೀ ಪೂಜೆ |ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

ಮೈಸೂರು: ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೋಮವಾರದಂದು ಈ ಬಾರಿಯ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗೆ ಪೂಜೆ ಸಲ್ಲಿಸಿದರು.

ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು , ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀಗಳವರನ್ನು ಆದರದಿಂದ ಬರಮಾಡಿಕೊಂಡು ಪೂಜೆಯನ್ನು ವ್ಯವಸ್ಥೆಗೊಳಿಸಿದರು . ಶ್ರೀ ಚಾಮುಂಡೇಶ್ವರಿಯ ಕೃಪೆಯಿಂದ ದಸರಾ ಉತ್ಸವ ಯಶಸ್ವಿಯಾಗಿ ನೆರವೇರಲಿ .ನಾಡಿನಲ್ಲಿ ಶಾಂತಿ , ಸಮೃದ್ಧಿ ಸುಭಿಕ್ಷೆಗಳು ನೆಲೆಯಾಗಲಿ ಎಂದು ಶ್ರೀಗಳು ಪ್ರಾರ್ಥಿಸಿದರು.

ದಸರಾ ಉತ್ಸವ ಸನಾತನ ಧರ್ಮದ ಶ್ರೇಷ್ಠ ಸಂಪ್ರದಾಯವಾಗಿದ್ದು ಇದನ್ನು ಅನೂಚಾಮವಾಗಿ ಶ್ರದ್ಧೆ ಭಕ್ತಿಯಿಂದ ಆಚರಿಸುವಲ್ಲಿ ಗಜಪಡೆಯ ಪಾತ್ರ ಮಹತ್ವದ್ಧಾಗಿದೆ .ಗಜಸಂತತಿ ಸಹಿತ ವನ್ಯಮೃಗಗಳ ನೆಮ್ಮದಿಯ ಬದುಕಿಗೂ ನಾವೆಲ್ಲ ಪ್ರಯತ್ನಿಸಬೇಕು .ನಾಡಿನ‌ ಜನರಿಗೂ ಕಾಡಿನ ಮೃಗಗಳಿಗೂ ನಡೆಯುವ ಸಂಘರ್ಷಗಳನ್ನು ಸುಸೂತ್ರವಾಗಿ ಪರಿಹರಿಸಲು ಸರ್ಕಾರ , ಜನತೆ ಸಹಕರಿಸಬೇಕು ಎಂದು ಆಶಿಸಿದರು .

Leave a Reply

Your email address will not be published. Required fields are marked *

Back to top button