Breaking Newsಕರ್ನಾಟಕ ರಾಜಕೀಯ

ಆರೋಪಿಗಳನ್ನ ಅಮಾಯಕರು ಅನ್ನುವ ಸ್ಥಿತಿಗೆ ಬಂದಿರುವುದು ನಿಜಕ್ಕೂ ಅಪಾಯಕಾರಿ – ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ಕಿಡಿ

ಚಿಕ್ಕಮಗಳೂರು : ಆರೋಪಿಗಳನ್ನ ಅಮಾಯಕರು ಅನ್ನುವ ಸ್ಥಿತಿಗೆ ಬಂದಿರುವುದು ನಿಜಕ್ಕೂ ಅಪಾಯಕಾರಿ. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ, ಬಿಜೆಪಿ ನಾಯಕ ಸಿ.ಟಿ.ರವಿ ಕಿಡಿಕಾರಿದರು.


ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಆರೋಪಿಗಳನ್ನು ಅಮಾಯಕರು ಅನ್ನುವುದು ಖಂಡನೀಯ. ಇಂತಹ ಮಾನಸಿಕತೆ ದೇಶದ ಸಮಗ್ರತೆಗೆ ಧಕ್ಕೆ.ಇಂತಹ ಮಾನಸಿಕತೆಯನ್ನು ಖಂಡಿಸುತ್ತೇನೆ.ಕಾನೂನು ಹೋರಾಟವನ್ನು ನಾವು ಮುಂದುವರೆಸುತ್ತೇವೆ ಎಂದಿದ್ದಾರೆ.ಉಗ್ರ ಚಟುವಟಿಕೆ ಯಲ್ಲಿ ತೊಡಗಿರುವ ಆರೋಪಿಗಳನ್ನು ರಕ್ಷಣೆ ಮಾಡುವುದು ಸರಿಯಲ್ಲ. ಒಳ್ಳೆಯರು ಯಾರು, ಕೆಟ್ಟವರು ಯಾರು ಎಂಬುದು ತಿಳಿದುಕೊಳ್ಳದಿದ್ರೆ ರಾಜ್ಯದ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.


ಉಡುಪಿ ಪ್ರಕರಣದಲ್ಲಿ ಪೊಲೀಸರು ತಡವಾಗಿ ಎಫ್ ಐ ಆರ್ ಬುಕ್ ಮಾಡಿದ್ದಾರೆ. ದೂರು ನೀಡಿದ ತಕ್ಷಣವೇ ಎಫ್ ಐ ಆರ್ ದಾಖಲಿಸಬೇಕಾಗಿತ್ತು. ಪ್ರಕರಣ ನಡೆದ ಕೂಡಲೇ ಪ್ರಕರಣ ದಾಖಲು ಮಾಡಿಕೊಳ್ಳಲು ವಿಳಂಬ ನೀತಿ ಸರಿಯಲ್ಲ, ಈ ಬಗ್ಗೆ ಸಮಗ್ರ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬರಲಿದೆ. ಈ ಬಗ್ಗೆ ಟ್ವಿಟ್ ಮಾಡಿದ ಅವರ ಮೇಲೆ ವಿಚಾರಣೆಗೆ ಒಳಪಡಿಸಿರುವುದು ಸರಿಯಲ್ಲ, ಈ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

Back to top button