Breaking Newsಕರ್ನಾಟಕ ರಾಜಕೀಯ

ಕೋವಿಡ್ ಹಗರಣ ತನಿಖೆ | ಮಾಜಿ ಸಚಿವರು ಮೈ ಮೇಲೆ ಚೇಳು ಬಿದ್ದಂತೆ ಆಡುತ್ತಿರುವುದು ಯಾಕೆ: ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಹಿಂದಿನ ಸರ್ಕಾರದ ಕೋವಿಡ್ ಸಮಯದಲ್ಲಿ ಅಕ್ರಮ ನಡೆದಿದೆ ಎಂದಿರುವ ಸರ್ಕಾರ ಅವುಗಳನ್ನು ತನಿಖೆಗೆ ಒಳಪಡಿಸಿದೆ. ಇದರ ವಿರುದ್ಧ ಮಾಜಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಕಿಡಿಕಾರಿದ್ದರು. ಸರ್ಕಾರ ದುರುದ್ದೇಶದಿಂದ ತನಿಖೆಗೆ ಮುಂದಾಗಿದೆ ಎಂದು ನಿನ್ನೆ ಹೇಳಿದ್ದರು.

ಈ ಹೇಳಿಕೆಗೆ ಕಾಂಗ್ರೆಸ್ ಇಂದು ಪ್ರತಿಕ್ರಿಯೆ ನೀಡಿದೆ. ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿ ಸುಧಾಕರ್ ಅವರನ್ನು ಗೇಲಿ ಮಾಡಿದೆ.

ಕೋವಿಡ್ ಹಗರಣವನ್ನು ತನಿಖೆಗೆ ವಹಿಸಿದರೆ ಡಾ. ಕೆ ಸುಧಾಕರ್ ಅವರು ಮೈಮೇಲೆ ಚೇಳು ಬಿದ್ದಂತೆ ಹೌಹಾರುತ್ತಿರುವುದೇಕೆ? ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದರೆ ಕುಂಬಳಕಾಯಿಯ ಕಳ್ಳರು ಇವರೇ ಎಂದರ್ಥವಲ್ಲವೇ!

ಹಗರಣವೊಂದನ್ನು ತನಿಖೆಗೆ ವಹಿಸುವುದು ದ್ವೇಷ ರಾಜಕಾರಣ ಹೇಗಾಗುತ್ತದೆ ಸುಧಾಕರ್ ಅವರೇ?

ಹಗರಣದ ಕಡೆ ನಾವು ಬೆರಳು ತೋರಿಸಿದಾಗ ಸಾಕ್ಷಿ ಎಲ್ಲಿದೆ, ತನಿಖೆಯಾಗಲಿ ಎನ್ನುವ ಬಿಜೆಪಿಗರು ತನಿಖೆಗೆ ವಹಿಸಿದಾಕ್ಷಣ ದ್ವೇಷ ರಾಜಕಾರಣ ಎಂದು ಚೀರಾಡುತ್ತಾರೆ!

ಬಿಜೆಪಿಗರು ಸತ್ಯ ಹರೀಶ್ಚಂದ್ರನ ಮರಿ ಮರಿ ಮೊಮ್ಮಕ್ಕಳಾಗಿದ್ದರೆ ಆತಂಕಪಡುವುದೇಕೆ?

ಕೋವಿಡ್‌ ಅಕ್ರಮ ಆರೋಪ ತನಿಖೆ ರಾಜಕೀಯ ಪ್ರೇರಿತ | ಯಾವುದೇ ತನಿಖೆಗೆ ಸಿದ್ಧ: ಮಾಜಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌

Leave a Reply

Your email address will not be published. Required fields are marked *

Back to top button