ಕರ್ನಾಟಕ ರಾಜಕೀಯ

ಜನತಾದರ್ಶನವೆಂಬ ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಎದುರಾದ ಪ್ರಶ್ನೆಗಳಿಗಿಲ್ಲ ಅವರ ಬಳಿ ಉತ್ತರ..! : ಬಿಜೆಪಿ ಟೀಕೆ

ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆ ರಾಜ್ಯದಾದ್ಯಂತ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ನಡೆಸಿ ಜನರ ಅಹವಾಲು ಸ್ವೀಕರಿಸಿದೆ. ಮನವಿ ಪತ್ರಗಳನ್ನು ಕೊಡಲು ರಾಜಧಾನಿ ಬೆಂಗಳೂರಿಗೆ ಜನ ಬರುವುದನ್ನು ತಪ್ಪಿಸಲು ಈ ಜಿಲ್ಲಾಮಟ್ಟದ ಜನತಾ ದರ್ಶನ ಹಮ್ಮಿಕೊಳ್ಳಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ ಈ ಜನತಾ ದರ್ಶನವನ್ನು ನಾಟಕ ಎಂದು ಜರಿದಿರುವ ಬಿಜೆಪಿ ಹಲವು ಪ್ರಶ್ನೆಗಳನ್ನು ಎಸೆದಿದೆ.

ಜನತಾದರ್ಶನವೆಂಬ ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಎದುರಾದ ಪ್ರಶ್ನೆಗಳಿಗಿಲ್ಲ ಅವರ ಬಳಿ ಉತ್ತರ..!

  • ಚುನಾವಣೆಗೂ ಮುನ್ನ ಘೋಷಿಸಿದ ಅನ್ನಭಾಗ್ಯದ ಹತ್ತು ಕೆಜಿ ಅಕ್ಕಿ ಕೊಡುತ್ತಿಲ್ಲ ಏಕೆ..?
  • ಬರಗಾಲ ಬಂದಿದ್ದರೂ ಸುಪ್ರೀಂ ತೀರ್ಪಿಗೂ ಮುನ್ನ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇಕೆ..?
  • ಪ್ರಧಾನಿ ಮೋದಿ ಅವರ ಸರ್ಕಾರದ ಯೋಜನೆಗಳನ್ನು ಕನ್ನಡಿಗರಿಗೆ ದೊರಕದಂತೆ ಮಾಡಿದ್ದೀರಿ ಏಕೆ..?
  • ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ತಡೆಯಲು ಪ್ರಯತ್ನ ಮಾಡುತ್ತಿಲ್ಲವೇಕೆ..?
  • ಹಳ್ಳಿಗಳಿಗೆ ಸರ್ಕಾರಿ ಸಾರಿಗೆ ಬಸ್‌ಗಳನ್ನು ಸರ್ಕಾರ ಬಿಡುತ್ತಿಲ್ಲ ಏಕೆ..?
  • ಒಂದು ಸಮುದಾಯದ ಉದ್ಧಾರಕ್ಕೆ ನೂರಾರು ಕೋಟಿ ಕೊಟ್ಟಿದ್ದೀರಿ, ಆದರೆ ನಿಮ್ಮಿಂದ ಬೇರೆ ಅಭಿವೃದ್ಧಿ ಆಗುತ್ತಿಲ್ಲವೇಕೆ..?
  • ಪ್ರತಿಯೊಂದರ ಬೆಲೆ ಏರಿಕೆ ಮಾಡಿ ಸ್ವಾಭಿಮಾನಿ ಕನ್ನಡಿಗರ ಬದುಕನ್ನು ಬೀದಿಗೆ ತಂದಿದ್ದೀರಿ ಏಕೆ..?

ವಿಧಾನಸೌಧದಲ್ಲಿ ಕೈಗೆ ಸಿಗದ ಸಚಿವರು ಅಡಗುತಾಣದಲ್ಲಿ ಅವಿತು ಕೂತಿದ್ದಾರೆ. ರಾಜ್ಯದ ಜನರು ಬೀದಿಯಲ್ಲಿ ನಿಂತು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

Leave a Reply

Your email address will not be published. Required fields are marked *

Back to top button