Breaking Newsಮುಖ್ಯಮಂತ್ರಿ ನ್ಯೂಸ್

ಮೂರು ವರ್ಷದ ಹಿಂದೆ ಮುಗಿದ ಕಾಮಗಾರಿಗಳ ಬಿಲ್‌ಗಾಗಿ ಆತುರ ಪಡಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಮೂರು ವರ್ಷದ ಹಿಂದೆಯೇ ಕಾಮಗಾರಿಗಳು ಮುಗಿದಿವೆ. ಈಗ ಬಿಲ್‌ಗಾಗಿ ಆತುರಪಟ್ಟರೆ ಹೇಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಪ್ರಶ್ನಿಸಿದ್ದಾರೆ.

ಮೈಸೂರು ಪ್ರವಾಸದಲ್ಲಿರುವ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಕಾಮಗಾರಿಗಳ ತನಿಖೆ ನಡೆಯಲಿದೆ. ತನಿಖೆ ಮುಗಿಯದೇ ಬಿಲ್ ಪಾವತಿ ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ತನಿಖೆಯಾಗಲೇಬೇಕು. ತಪ್ಪು ಮಾಡದವರಿಗೆ ಆತಂಕ ಯಾಕೆ . ತಪ್ಪು ಮಾಡದ ಗುತ್ತಿಗೆದಾರರಿಗೆ ಯಾವುದೇ ಸಮಸ್ಯೆಯಾಗಲ್ಲ. ತಪ್ಪು ಮಾಡಿರುವ ಗುತ್ತಿಗೆದಾರರಿಗೆ ಮಾತ್ರ ಭಯ ಇರುತ್ತೆ ಎಂದು ಹೇಳಿದರು.

ಬಿಜೆಪಿಗೆ ನೈತಿಕತೆ ಇಲ್ಲ:
ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ನಾವು 40% ಕಮಿಷನ್‌ ಆರೋಪ ಸಾಬೀತುಪಡಿಸಬೇಕಿದೆ. ಈ ಕಮಿಷನ್‌ ಬಗ್ಗೆ 4 ತಂಡದಿಂದ ತನಿಖೆ ಮಾಡಲಾಗುವುದು ಎಂದರು.

ಹುಟ್ಟು ಹಬ್ಬದ ಬಗ್ಗೆ ಆಸಕ್ತಿ ಇಲ್ಲ:
ತಮ್ಮ ಹುಟ್ಟುಹಬ್ಬವನ್ನು ಆಗಸ್ಟ್‌ 3 ಮತ್ತು ಆಗಸ್ಟ್‌ 12 ರಂದು ಆಚಿಸಲಾಗುತ್ತಿದೆಯಲ್ಲ ಎಂಬ ಬಗ್ಗೆ ಮಾಧ್ಯಮದವರು ಕೇಳಿದಾಗ,
ಆಗಸ್ಟ್ 3, 12 ಎರಡೂ ತಪ್ಪು ದಿನಾಂಕಗಳು. ಒಂದು. ನನ್ನ ಮೇಷ್ಟ್ರು ಬರೆಸಿರೋದು. ಇನ್ನೊಂದು, ನನ್ನ ಅಪ್ಪ ಬರೆಸಿರೋದು. ಹೀಗಾಗಿ ಎರಡೂ ದಿನಾಂಕಗಳು ತಪ್ಪು. ನನ್ನ ಜನ್ಮ ದಿನಾಂಕದ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ಇದರಲ್ಲಿ ಯಾವುದೇ ಆಸಕ್ತಿಯೂ ನನಗೆ ಇಲ್ಲ ಎಂದರು.

Leave a Reply

Your email address will not be published. Required fields are marked *

Back to top button