Breaking Newsಮುಖ್ಯಮಂತ್ರಿ ನ್ಯೂಸ್

ಕೇವಲ ಮೌಡ್ಯ ತುಂಬಿಕೊಂಡವರು ವಿವಿಗಳಿಂದ ಹೊರಗೆ ಬಂದರೆ ಏನು ಪ್ರಯೋಜನ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ದೇಶವನ್ನು, ನಾಡನ್ನು ಮುನ್ನಡೆಸಲು ವೈಜ್ಞಾನಿಕ ಮನೋಭಾವದ, ವೈಚಾರಿಕ ತಿಳಿವಳಿಕೆಯ ಪದವೀಧರರ ಅಗತ್ಯವಿದೆ

ಬೆಂಗಳೂರು ಆ 21: ವೈಜ್ಞಾನಿಕತೆ ಮತ್ತು ವೈಚಾರಿಕತೆ ಇಲ್ಲದೆ ತಲೆ ತುಂಬ ಕೇವಲ ಮೌಡ್ಯವನ್ನೇ ತುಂಬಿಕೊಂಡ ಪದವೀಧರರು ವಿಶ್ವ ವಿದ್ಯಾಲಯಗಳಿಂದ ಹೊರಗೆ ಬಂದರೆ ದೇಶಕ್ಕೆ, ನಾಡಿಗೆ ಮತ್ತು ಈ ಸಮಾಜಕ್ಕೆ ಏನು ಪ್ರಯೋಜನ ? ಆದ್ದರಿಂದ ವೈಜ್ಞಾನಿಕ ಮನೋಭಾವದ ಪದವೀಧರರನ್ನು ಸಜ್ಜುಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಲಪತಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 21-8-2023 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ಕಾರದ ವ್ಯಾಪ್ತಿಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ರೀತಿ ಪ್ರಶ್ನಿಸಿದರು.

ದೇಶವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಆರ್ಥಿಕವಾಗಿ ಮತ್ತು ನಾಗರಿಕವಾಗಿ ಮುನ್ನಡೆಸುವ ಪದವೀಧರರನ್ನು ವಿಶ್ವ ವಿದ್ಯಾಲಯಗಳು ಸಜ್ಜುಗೊಳಿಸಬೇಕು. ಅದನ್ನು ಬಿಟ್ಟು ಕೇವಲ ಮೌಡ್ಯಗಳನ್ನು ತುಂಬಿಕೊಂಡು ಹೊರಗೆ ಬಂದರೆ ಅದರಿಂದ ದೇಶಕ್ಕೂ ಉಪಯೋಗವಿಲ್ಲ. ನಾಡಿಗೂ ಪ್ರಯೋಜನವಿಲ್ಲ. ಪದವೀಧರರ ಭವಿಷ್ಯಕ್ಕೂ ಉಪಯೋಗವಿಲ್ಲ ಎಂದರು.

ರಾಜ್ಯದ ಅತ್ಯಂತ ಹಳೆಯ ಮತ್ತು ಮೊದಲ ವಿವಿ ಆಗಿರುವ ಮೈಸೂರು ವಿವಿಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

Leave a Reply

Your email address will not be published. Required fields are marked *

Back to top button