Breaking Newsಮುಖ್ಯಮಂತ್ರಿ ನ್ಯೂಸ್

14 ಪತ್ರಕರ್ತರ ಮೇಲೆ ಬಹಿಷ್ಕಾರ ಹೇರಿದ್ದನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇಲ್ಲ: ಸಿದ್ದರಾಮಯ್ಯ

ಬೆಂಗಳೂರು: 14 ಟಿ ವಿ ನಿರೂಪಕರಿಗೆ “ಇಂಡಿಯಾ” ಒಕ್ಕೂಟ ಬಹಿಷ್ಕಾರ ಹೇರಿದ್ದನ್ನು ಪ್ರಶ್ನಿಸುತ್ತಿರುವ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಾಂಗ್‌ ನೀಡಿದ್ದಾರೆ. ಬಿಜೆಪಿಗೆ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸತ್ಯದ ದನಿಯಾಗಿ ನಿಂತ ಪತ್ರಕರ್ತರ ಮೇಲೆ ಬಿಜೆಪಿ ದಾಳಿ ನಡೆಸಿತ್ತು ಎಂದು ದೂರಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಮಾನ್ಯ J.P.Nadda ಅವರೇ,
ಮಾಧ್ಯಮಗಳ ಮೇಲಿನ ನೈಜ ದಾಳಿಗಳ ಪಟ್ಟಿ ನಾವು ಕೊಡುತ್ತೇವೆ. ಇದನ್ನೆಲ್ಲ ನೀವು ಮರೆತಿರಬಹುದು, ಆದರೆ “ಇಂಡಿಯಾ” ಮರೆತಿಲ್ಲ.

ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ ಪತ್ರಕರ್ತರು:

  • ಸಿದ್ದಿಕ್‌ ಕಪ್ಪನ್‌
  • ಮೊಹಮ್ಮದ್‌ ಝುಬೇರ್
  • ಅಜಿತ್‌ ಓಝಾ
  • ಜಸ್ಪಾಲ್‌ ಸಿಂಘ್‌
  • ಸಜದ್‌ ಗುಲ್‌

ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದ ಪತ್ರಕರ್ತರು:

  • ರಾಕೇಶ್‌ ಸಿಂಗ್‌ ಉತ್ತರ ಪ್ರದೇಶ, ಸರ್ಕಾರಿ ನಿಧಿ ಅವ್ಯವಹಾರ ಕುರಿತು ವರದಿ
  • ಶುಭಂ ಮಣಿ ತ್ರಿಪಾಠಿ, ಉತ್ತರ ಪ್ರದೇಶ, ಮರಳು ದಂಧೆ ಕುರಿತು ವರದಿ
  • ಜಿ ಮೋಸೆಸ್‌, ತಮಿಳುನಾಡು, ಗೋಮಾಳ ಅಕ್ರಮ ಮಾರಾಟ ಕುರಿತು ವರದಿ
  • ಪರಾಗ್‌ ಭುಯಾನ್, ಅಸ್ಸಾಮ್‌, ಎಸ್‌ಐನೇಮಕಾತಿ ಹಗರಣ ಕುರಿತು ವರದಿ
  • ಗೌರಿ ಲಂಕೇಶ್‌, ಕೋಮುವಾದ ವಿರೋಧಿಸಿದ್ದಕ್ಕೆ

ಪತ್ರಿಕಾ ಸ್ವಾತಂತ್ಯ್ರ: ಜಗತ್ತಿನಲ್ಲಿ ಭಾರತದ ಸ್ಥಾನ, ಅವಸಾನ..!!
2015 – 136ನೇ ಸ್ಥಾನ
2019 – 140ನೇ ಸ್ಥಾನ
2022 – 150ನೇ ಸ್ಥಾನ
2023 – 161ನೇ ಸ್ಥಾನ

ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ.
ಪ್ರಧಾನಿ Narendra Modi ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ನಿಜವಾದ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ…!!

Leave a Reply

Your email address will not be published. Required fields are marked *

Back to top button