Breaking Newsಕರ್ನಾಟಕ ರಾಜಕೀಯ

ಕೃಷಿ ಸಚಿವ ಚಲುವರಾಯ ಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ | ಬಂಧಿತ ಅಧಿಕಾರಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಸಿಐಡಿ

ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿ ರಾಜ್ಯಪಾಲ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರಿಗೆ ಪತ್ರ ಬರೆದ ಪ್ರಕರಣ ಸಂಬಂಧ ಬಂಧನಕ್ಕೊಳಗಾದ ಅಧಿಕಾರಿಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಬಂಧಿತ ಅಧಿಕಾರಿಗಳ ಸಿಐಡಿ ಕಸ್ಟಡಿ ಅವಧಿ ಮುಕ್ತಾಯವಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದ ಸಿಐಡಿ ಸಂಪೂರ್ಣ ವಿಚಾರಣೆ ನಡೆಸಿದೆ. ವಿಚಾರಣಾ ಅವಧಿ ಮುಕ್ತಯವಾದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಈ ಪತ್ರದ ಹಿಂದೆ ರಾಜಕೀಯ ನಾಯಕರ ಕೈವಾಡ ಇರುವ ಬಗ್ಗೆ ಅಧಿಕಾರಿಗಳು ಬಾಯಿ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವಾರ ಸಿಐಡಿ ವರದಿ ಸಲ್ಲಿಸಲಿದ್ದು ವರದಿಯಲ್ಲಿನ ಸತ್ಯಾಸತ್ಯತೆ ಬಹಿರಂಗ ಆಗಲಿದೆ. ಒಂದು ವೇಳೆ ಯಾವುದೇ ಪಕ್ಷದ ಮುಖಂಡರು ರಾಜಕೀಯ ಷಡ್ಯಂತ್ರ ನಡೆಸುವ ಸಲುವಾಗಿ ಪತ್ರ ಬರೆಸಿರುವುದು ಬಹಿರಂಗವಾದರೆ ಇದು ಹೊಸ ತಿರುವನ್ನು ಪಡೆದುಕೊಳ್ಳಲಿದೆ.

Leave a Reply

Your email address will not be published. Required fields are marked *

Back to top button