Breaking Newsಸುದ್ದಿ ಸಮಾಚಾರ

ಚಂದ್ರಯಾನ 3 ‘ವಿಕ್ರಮ್ ಲ್ಯಾಂಡರ್’ ಲ್ಯಾಂಡಿಂಗ್ ಗೆ ಕ್ಷಣಗಣನೆ ಆರಂಭ |ವಿಶ್ವದ ಚಿತ್ತ ಭಾರತದತ್ತ..!!

ಬೆಂಗಳೂರು: ಚಂದ್ರಯಾನ 3 ‘ವಿಕ್ರಮ್ ಲ್ಯಾಂಡರ್’ ಲ್ಯಾಂಡಿಂಗ್ ಗೆ ಕ್ಷಣಗಣನೆ ಆರಂಭವಾಗಿದೆ.ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ಸಜ್ಜಾಗಿದ್ದು, ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಚಂದ್ರಯಾನ -3 ಯಶಸ್ವಿಗೆ ಭಾರತೀಯರೆಲ್ಲರು ಬಯಸುತ್ತಿದ್ದಾರೆ.

ಇಂದು ಭಾರತಕ್ಕೆ ಮತ್ತು ವಿಶೇಷವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ದೊಡ್ಡ ದಿನವಾಗಿದ್ದು, ಭಾರತದ ಚಂದ್ರಯಾನ ಇಂದು ಬಹಳ ವಿಶೇಷ ಹಂತವನ್ನ ತಲುಪಲಿದೆ. ಇಂದು ಸಂಜೆ 6.04ಕ್ಕೆ ಭಾರತದ ಚಂದ್ರಯಾನ 3 ಚಂದ್ರನ ಮೇಲೆ ಇಳಿಯಲಿದೆ.

ಚಂದ್ರಯಾನ 3ರ ಲ್ಯಾಂಡಿಂಗ್ ನೇರ ಪ್ರಸಾರವನ್ನ ಇಂದು ಸಂಜೆ 5 ರಿಂದ 6.30ರವರೆಗೆ ಇಸ್ರೋ ವೆಬ್ ಸೈಟ್ ‌ಮೂಲಕ ನೋಡಬಹುದಾಗಿದೆ. ಈ ಐತಿಹಾಸಿಕ ಕ್ಷಣವನ್ನು ವಿದ್ಯಾರ್ಥಿಗಳು ನೋಡುವುದು ಅವಶ್ಯಕವಾಗಿದ್ದು, ವೀಕ್ಷಣೆಗೆ ಯೋಜನೆಯನ್ನ ಮಾಡಲಾಗಿದೆ. ಇದಕ್ಕೂ ಮುಂಚೆಯೇ, ಇಸ್ರೋ ಚಂದ್ರಯಾನವನ್ನ ಇಳಿಸಲು ಪ್ರಯತ್ನಿಸಿತ್ತು ಆದರೆ ಅದು ಯಶಸ್ವಿಯಾಗಲಿಲ್ಲ. ಸೆಪ್ಟೆಂಬರ್ 7, 2019ರಂದು, ಚಂದ್ರಯಾನ2 ಕೊನೆ ಕ್ಷಣದಲ್ಲಿ ವಿಫಲವಾಗಿತ್ತು. ಕಳೆದ ವಾರ ರಷ್ಯಾದ ಪ್ರಯತ್ನವು ಕೊನೆ ಕ್ಷಣದಲ್ಲಿ ವಿಫಲವಾಗಿತ್ತು. ಅದರಿಂದ ಎಲ್ಲರ ದೃಷ್ಟಿ ಭಾರತದೆಡೆಗೆ ಇರುವುದರಿಂದ, ಇದರಲ್ಲಿ ಯಶಸ್ಸು ಪಡೆದರೆ, ಭಾರತಕ್ಕೆ ಇದು ಐತಿಹಾಸಿಕ ದಿನವಾಗಲಿದೆ.

ಚಂದ್ರಯಾನ3 ನೇರ ಪ್ರಸಾರವನ್ನು ನಿಮ್ಮ ಮೊಬೈಲ್ ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಲೈವ್ ಸ್ಟ್ರೀಮಿಂಗ್ ಅನ್ನು ಸಂಜೆ 5ರಿಂದ ಮಾಡಲಾಗುತ್ತದೆ. ಇದು ಡಿಡಿ ನ್ಯಾಷನಲ್ ಟಿವಿ ಮತ್ತು ಇತರ ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರವಾಗಲಿದೆ. ನಿಮಗೆ ದೂರದರ್ಶನದ ಮೂಲಕ ನೋಡಲು ಸಾಧ್ಯವಾಗದೇ ಇದ್ದಲ್ಲಿ, ನಿಮ್ಮ ಫೋನ್ನಲ್ಲಿ isro.gov.in ಹೋಗುವ ಮೂಲಕ ನೀವು ಈ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಇಸ್ರೋದ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಪುಟ ಅಥವಾ ಇಸ್ರೋ ವೆಬ್ ಸೈಟ್ ಲಾಗಿನ್ ಆಗಿ,ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಬಹುದು.

Leave a Reply

Your email address will not be published. Required fields are marked *

Back to top button