Breaking Newsಕರ್ನಾಟಕ ರಾಜಕೀಯ

ಬಿಜೆಪಿ ಶಾಸಕರು, ಮುಖಂಡರ ಘರ್‌ ವಾಪ್ಸಿ ಸಂಕಟ | ಅಖಾಡಕ್ಕಿಳಿದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಮುಖಂಡರ ಘರ್‌ವಾಪ್ಸಿ ಸಂಕಟ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. “ನಾವು ಬಿಜೆಪಿ ತೊರೆಯುತ್ತಿಲ್ಲʼ ಎಂದು ಹಲವರು ಹೇಳಿದ್ದರೂ ತೆರೆಮರೆಯಲ್ಲಿ ಕಾಂಗ್ರೆಸ್‌ ಸೇರುವ ಎಲ್ಲಾ ಬೆಳವಣಿಗೆ ನಡೆಯುತ್ತಿದೆ. ಅಧಿಕಾರ ಮತ್ತು ಸ್ಥಾನಮಾನದ ಮೇಲೆ ಕಣ್ಣಿಟ್ಟು ಬಿಜೆಪಿಗರು ಕಾಂಗ್ರೆಸ್‌ ಸೇರುತ್ತಿದ್ದಾರೆ ಎಂಬುದೆಲ್ಲ ಗುಟ್ಟಾಗಿ ಉಳಿದಿಲ್ಲ.

ಕೈ ತಪ್ಪಿ ಹೋಗುತ್ತಿರುವ ಶಾಸಕರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಈಗ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಮುಂದಾಗಿದ್ದಾರೆ. ಬಿಎಸ್‌ವೈ ನಿವಾಸದಲ್ಲಿ ಶುಕ್ರವಾರ ಸಂಜೆ ಬಿಬಿಎಂಪಿ ವ್ಯಾಪ್ತಿಯ ಶಾಸಕರ ತುರ್ತು ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ ಸೇರುವ ತಮ್ಮ ಪಕ್ಷದ ನಾಯಕರ ಪ್ರಯತ್ನವನ್ನು ತಣ್ಣಗಾಗಿಸುವ ಕುರಿತು ಚರ್ಚೆ ನಡೆಸಿದರು.

ಬಸವರಾಜ ಬೊಮ್ಮಾಯಿ, ಆರ್‌ ಅಶೋಕ್‌, ಕೆ ಗೋಪಾಲಯ್ಯ, ಮರುಗೇಶ್‌ ನಿರಾಣಿ, ಎಸ್‌ ರಘು, ಎಸ್‌ ಆರ್‌ ವಿಶ್ವನಾಥ ಇತರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸು ಕುಸಿಯದಂತೆ ನೋಡಿಕೊಳ್ಳುವುದು, ಶಾಸಕರು ಹಾಗೂ ಮುಖಂಡರ ಅಸಮಾಧಾನವನ್ನು ಶಮನ ಮಾಡುವುದು ಹಾಗೂ ಕೈ ಕಡೆ ವಾಲುವವರ ಮನಸ್ಸನ್ನು ಬದಲಾಯಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು.

ಶಾಸಕರ ಮನವೊಲಿಸುವ ಹೊಣೆಗಾರಿಕೆಯನ್ನು ಬಿಜೆಪಿ ಹೈಕಮಾಂಡ್‌ ಬಿ ಎಸ್‌ ಯಡಿಯೂರಪ್ಪ, ಡಿ ವಿ ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಹಾಗೂ ಆರ್‌ ಅಶೋಕ್‌ ಅವರಿಗೆ ವಹಿಸಿದೆ ಎನ್ನಲಾಗುತ್ತಿದೆ.

ರಾಜ್ಯ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ
ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆಕ್ರೋಶ ಹೊರಹಾಕಿರುವ ಬಿ ಎಸ್‌ ಯಡಿಯೂರಪ್ಪ ಅವರು, ಇದೇ 23 ರಂದು ಬೃಹತ್‌ ಹೋರಾಟಕ್ಕೆ ಕರೆ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ 6000 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಈ ಪ್ರತಿಭಟನೆ ನಡೆಯಲಿದೆ.

Leave a Reply

Your email address will not be published. Required fields are marked *

Back to top button