Breaking Newsನಮ್ಮ ಶಾಸಕರು

ಶಾಸಕ ಬಿ ಆರ್‌ ಪಾಟೀಲ್‌ ಮತ್ತೆ ಅಸಮಾಧಾನದ ಮಾತು | ನಮ್ಮ ಎಂ ಎಲ್‌ ಎ ಗಳಿಗೆ ಫುಲ್‌ ಮಾರ್ಕೆಟ್‌ ಬಂದಿದೆ..!

ಕಲಬುರಗಿ: ಸಚಿವರು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತಿಲ್ಲ ಎಂಬ ಆರೋಪ ಮಾಡಿ ಪತ್ರ ಬರೆದು ಸುದ್ದಿಯಾಗಿದ್ದ ಶಾಸಕ ಬಿ ಆರ್‌ ಪಾಟೀಲ್‌ ಅವರು ಇಂದು ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.

ಕಲಬುರಗಿಯಲ್ಲಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ಎಂಎಲ್‌ಎ ಗಳಿಗೆ ಫುಲ್‌ ಮಾರ್ಕೆಟ್‌ ಬಂದಿದೆ. ಈಗ ಎಲ್ಲಾ ಶಾಸಕರು ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಮಾಡದೇ ಹೋದರೆ ಮತ್ತೆ ನಾವು ಬಿಡಲ್ಲ. ಯಾವೊತ್ತು ಶಾಕ್‌ ಟ್ರೀಟ್‌ಮೆಂಟ್‌ ಆಗಿದೆಯೊ ಅಂದಿನಿಂದ ಶಾಸಕರು ಸ್ಪಂದಿಸುವ ರೀತಿಯೇ ಬದಲಾಗಿದೆ ಎಂದು ಹೇಳಿದರು.

ಶಾಸಕರು ಸರಿಯಾಗಿ ಸ್ಪಂದಿಸದಿದ್ದರೆ ಮತ್ತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಳುತ್ತೇವೆ. ಆದರೆ ಯಾವುದನ್ನೂ ಬೀದಿಗೆ ತರೋದಿಲ್ಲ. ಮತ್ತೆ ಲೆಟರ್‌ ಬರೀಬಹುದು. ಶಾಸಕಾಂಗ ಪಕ್ಷದ ಬೈಲಾದಲ್ಲೇ ಅವಕಾಶ ಇದೆ. ಒಬ್ಬ ಸದಸ್ಯ ಮನವಿ ನೀಡಿದರೆ ಶಾಸಕಾಂಗ ಪಕ್ಷದ ಸಭೆ ಕರೆಯಲೇಬೇಕು.

ನಾವು ಮಾತನಾಡಬಾರದು ಎಂದು ಹೇಳಿಲ್ಲ. ಮುಕ್ತವಾಗಿ ಚರ್ಚೆ ಆಗಿದೆ. ಯಾವುದೇ ಸಾಂವಿಧಾನಿಕ ಪಕ್ಷದಲ್ಲಿ ಚರ್ಚೆ, ವಾದ, ವಿವಾದ, ಸಂವಾದ ಆಗಲೇಬೇಕು. ಆದರೆ ಮಾತ್ರವೇ ಅದಕ್ಕೆ ಬೆಲೆ. ಚರ್ಚೆಯನ್ನು ನಾವು ನಿರಂತರವಾಗಿಡುತ್ತೇವೆ.
ನಾನು ಅಪರಾಧ ಮಾಡಿಲ್ಲ. ಮಾಡೋ ಕೆಲಸ ಮಾಡಿದ್ದೇನೆ.
ಸಚಿವರು ಎಲ್ಲಾ ಸರಿಯಾಗೋ ವರೆಗೆ ನಾವು ಬಿಡುವುದಿಲ್ಲ ಎಂದು ಗುಡುಗಿದರು.

Leave a Reply

Your email address will not be published. Required fields are marked *

Back to top button