Breaking Newsಕರ್ನಾಟಕ ರಾಜಕೀಯ

ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದುವರಿದ ಭ್ರಷ್ಟಾಚಾರ ಆರೋಪ | ಎಟಿಎಂ ಸರ್ಕಾರದ ಕಲೆಕ್ಷನ್‌ ವಂಶಾವಳಿ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಟಿಎಂ ಸರ್ಕಾರ ಎಂದು ವ್ಯಂಗ್ಯವಾಡುತ್ತಿದ್ದ ಬಿಜೆಪಿ ಇದೀಗ ಎಟಿಎಂ ಸರ್ಕಾರದ ಕಲೆಕ್ಷನ್‌ ವಂಶಾವಳಿ ಬಿಡುಗಡೆ ಮಾಡಿದೆ.

ಈ ವಂಶಾವಳಿ ಪ್ರಕಾರ, ಮಧ್ಯದಲ್ಲಿ ರಾಹುಲ್‌ ಗಾಂಧಿ ಅವರಿದ್ದು, ಅವರ ಪಕ್ಕದಲ್ಲಿ ಸುರ್ಜೆವಾಲ ಹಾಗೂ ಕೆ ಸಿ ವೇಣುಗೋಪಾಲ್‌ ಅವರಿದ್ದಾರೆ.

ಮೂರನೇ ಸಾಲಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಅವರನ್ನು ಇರಿಸಿದ್ದಾರೆ. ಸಿದ್ದರಾಮಯ್ಯ ಅವರ ಕೆಳಗೆ ಯತೀಂದ್ರ ಹಾಗೂ ಬೈರತಿ ಸುರೇಶ್‌ ಇದ್ದಾರೆ ಇವರಿಬ್ಬರ ಕೆಳಗೆ ಕಾಂಗ್ರೆಸ್‌ ಕಲೆಕ್ಷನ್‌ ಏಜೆಂಟ್‌ಗಳೆಂದು ರಾಮಯ್ಯ ಹಾಗೂ ಕೆಂಪಣ್ಣ ಅವರನ್ನು ಇರಿಸಿದ್ದಾರೆ.

ಇನ್ನು ಡಿ ಕೆ ಶಿವಕುಮಾರ್‌ ಅವರ ಕೆಳಗೆ ಅಂಬಿಕಾಪತಿ ಹಾಗೂ ಅವರ ಕೆಳಗೆ ಕಾಂಗ್ರೆಸ್‌ ಕಲೆಕ್ಷನ್‌ ಏಜೆಂಟ್ಸ್‌ ಗಳಾಗಿ ಪ್ರದೀಪ್‌, ಪ್ರಮೋದ್‌, ಪ್ರಹ್ಲಾದ್‌ ಹಾಗೂ ಲೂಟಿ ಕಂಪನಿಯನ್ನು ಇರಿಸಲಾಗಿದೆ.

Leave a Reply

Your email address will not be published. Required fields are marked *

Back to top button