Breaking NewsOthersಕರ್ನಾಟಕ ರಾಜಕೀಯಜನ-ಪ್ರತಿನಿಧಿನಮ್ಮ ಶಾಸಕರುಮಾಧ್ಯಮ ಕರ್ನಾಟಕಶಾಸಕ ವಾರ್ತೆಸುದ್ದಿ ಸಮಾಚಾರ

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಇದೇ ಮೊದಲ ಬಾರಿ ಮಹಿಳಾ ಸಾರಥ್ಯ!?

ಅಚ್ಚರಿಯ ಹೆಸರು ಸೂಚಿಸಿದ ಮಾಜಿ ಮುಖ್ಯಮಂತ್ರಿ

ಬೆಂಗಳೂರು: ವಿಧಾನಸಭಾ ಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಹೊಸ ಸಾರಥಿಯ ಹುಡುಕಾಟದಲ್ಲಿರುವ ನಡುವೆಯೇ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಚ್ಚರಿಯ ಹೆಸರು ಸೂಚಿಸಿದ್ದಾರೆ.

ಹೌದು, ಎಲ್ಲವೂ ಅಂದುಕೊಂಡಂತೆ ನಡೆದರೆ ಶೋಭಾ ಕರಂದ್ಲಾಜೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಏರುವುದು ನಿಶ್ಚಿತ. ಒ‌ಂದು ವೇಳೆ ಬಿ.ಎಸ್.ವೈ ಅವರ ಇದೇ ತೀರ್ಮಾನ ಅಂತಿಮವಾದದ್ದೇ ಆದರೆ, ಕರ್ನಾಟಕ ಬಿಜೆಪಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ರಾಜ್ಯಾಧ್ಯಕ್ಷರಾಗಿ ಶೋಭಾ ಕರಂದ್ಲಾಜೆ ನೇಮಕವಾಗಲಿದ್ದಾರೆ.

ನಳಿನ್ ಕುಮಾರ್ ಕಟೀಲ್ ಅವರ ರಾಜ್ಯಾಧ್ಯಕ್ಷ ಹುದ್ದೆಯ ಅವಧಿ ಮುಗಿದಿದೆ. ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರಿಸುವ ಇಂಗಿತ ಬಿಜೆಪಿ ವರಿಷ್ಠಿರಿಗೆ ಇದ್ದಂತಿಲ್ಲ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹೆಸರುಗಳು ಕೇಳಿಬರುತ್ತಿವೆ. ಇದರ ನಡುವೆ ಈಗ ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿಗೆ ಬಂದಿದೆ.

ಬಿ.ಎಸ್.ವೈ ಹೊಸ ರಾಜಕೀಯ ಇನ್ನಿಂಗ್ಸ್:

ಈಗಾಗಲೇ ರಾಜೀನಾಮೆ ಘೋಷಿಸಿರುವ ಬಿ.ಎಸ್‌ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರ ಹೆಸರನ್ನು ಹೇಳುವ ಮೂಲಕ ಇನ್ನೊಂದು ರಾಜಕೀಯ ಇನ್ನಿಂಗ್ಸಿನ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ಸೋಲಿನಿಂದ ಚೇತರಿಸಿಕೊಳ್ಳಲಾಗದ ಬಿಜೆಪಿ ಮುಖಂಡರು, ಬಿ.ಎಸ್.ವೈ. ಅವರ ಮಾತಿಗೆ ಮಣೆ ಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮತ್ತೊಂದೆಡೆ ಬಿ.ಎಸ್.ವೈ. ಕುಟುಂಬದಿಂದ ದೂರವೇ ಇರಿಸಲಾಗಿದ್ದ ಶೋಭಾ ಕರಂದ್ಲಾಜೆ ಅವರ ಜೊತೆ ಬಿ.ಎಸ್.ವೈ. ಹಾಗೂ ವಿಜಯೇಂದ್ರ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಕರಾವಳಿಯ ನಾಯಕಿ:

ಶೋಭಾ ಕರಂದ್ಲಾಜೆ ಅವರು ಹುಟ್ಟೂರು ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಕರಂದ್ಲಾಜೆ. ಪುಟ್ಟ ಗ್ರಾಮದಿಂದ ಹೊರಟ ಶೋಭಾ, ಇದೀಗ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ಹೆಸರು.

ಈ ಹಿಂದೆ ಕರಾವಳಿಯ ಡಿ.ವಿ. ಸದಾನಂದ ಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಉಲ್ಲೇಖನೀಯ.

Leave a Reply

Your email address will not be published. Required fields are marked *

Back to top button