Breaking Newsಕರ್ನಾಟಕ ರಾಜಕೀಯ

ಸರಳ ದಸರಾ ಆಚರಣೆಗೆ ಸರ್ಕಾರದ ನಿರ್ಧಾರ |ಬಿಟ್ಟಿ ಶೋಕಿಗಳಿಗೆ ಕೋಟಿ ಕೋಟಿ ಖರ್ಚು: ಬಿಜೆಪಿ ಟೀಕೆ

ಬೆಂಗಳೂರು: ರಾಜ್ಯದ ಮಳೆ ಕೊರತೆ ಹಾಗೂ ತೀವ್ರ ಬರಗಾಲದ ಕಾರಣ ಈ ಬಾರಿಯ ದಸರಾವನ್ನು ಸರಳ ರೀತಿಯಲ್ಲಿ ಆಚರಣೆಗೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಟೀಕೆ ಮಾಡಿದೆ.

ಬಿಟ್ಟಿ ಶೋಕಿಗಳಿಗೆ ಕೋಟಿ ಕೋಟಿ ಖರ್ಚು ಮಾಡುವ ಸಿದ್ದರಾಮಯ್ಯ ಅವರ ಸರ್ಕಾರ ಇದೀಗ ಮೈಸೂರು ದಸರಾ ಆಚರಣೆಯನ್ನು ಮಾತ್ರ ಸರಳವಾಗಿ ಆಚರಣೆ ಮಾಡಲು‌ ಮುಂದಾಗಿದೆ

ರಾಜೀವ್ ಗಾಂಧಿ ಪ್ರತಿಮೆ ಮಾಡುವುದಕ್ಕೆ, I.N.D.I ಮೈತ್ರಿಕೂಟದ ಸಭೆ ಮಾಡುವುದಕ್ಕೆ, ಅಲ್ಪಸಂಖ್ಯಾತರು, ಮಿಷನರಿಗಳ ಉದ್ಧಾರಕ್ಕಾಗಿ ಕಾಂಗ್ರೆಸ್ ಸರ್ಕಾರದ ಬಳಿ ಕೋಟಿ ಕೋಟಿ ಹಣವಿದೆ. ಆದರೆ ನಾಡ ಹಬ್ಬ ದಸರಾ ಆಚರಿಸಲು, ಕನ್ನಡ ವಿವಿಗಳಿಗೆ ಅನುದಾನ ಕೊಡಲು, ಹಂಪಿ ಉತ್ಸವ ಆಚರಿಸಲು ಮಾತ್ರ ಸರ್ಕಾರಕ್ಕೆ ಬರ, ಅನುದಾನ ಕೊರತೆ ಅಡ್ಡ‌ ಬರುತ್ತದೆ ಎಂದು ಹೇಳಿದೆ.

ಈ ಹಿಂದೆಯೂ ಸಿದ್ದರಾಮಯ್ಯ ಅವರು ದಸರಾ ಆಚರಣೆಗೆ ಹಣವಿಲ್ಲವೆಂದು ಹೇಳಿ, ಅದ್ಧೂರಿಯಾಗಿ ರಾಜ್ಯದ ತುಂಬಾ ಟಿಪ್ಪು ಜಯಂತಿಯನ್ನು ಆಚರಿಸಿದ್ದರು.

ಮೈಸೂರು ದಸರಾ ಅಂದರೆ ಈ ಸರ್ಕಾರ ಮೂಗು ಮುರಿಯುವುದೇಕೆ? ಎಂದು ಪ್ರಶ್ನಿಸಿದೆ.

Leave a Reply

Your email address will not be published. Required fields are marked *

Back to top button