Breaking Newsಕರ್ನಾಟಕ ರಾಜಕೀಯ

ಬಿಜೆಪಿ- ಜೆಡಿಎಸ್‌ ಮೈತ್ರಿಗೆ ಕಾಂಗ್ರೆಸ್‌ ವ್ಯಂಗ್ಯ: ಮೈತ್ರಿಯಾದರೆ ಸಿದ್ದಾಂತ ಹೇಗೆ ಉಳಿಸಿಕೊಳ್ತಾರೆ..?

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ- ಜೆಡಿಎಸ್‌ ಮೈತ್ರಿ ಖಚಿತವಾಗುತ್ತಿದ್ದು, ಈ ಬೆಳವಣಿಗೆಗೆ ಕಾಂಗ್ರೆಸ್‌ ವ್ಯಂಗ್ಯವಾಡಿದೆ. ಮೈತ್ರಿಯನ್ನು ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಖಚಿತಪಡಿಸಿದ್ದಾರೆ.

ತಲೆಕಡೆಸಿಕೊಳ್ಳಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಯಾರೇ ಮೈತ್ರಿ ಮಾಡಿಕೊಂಡರೂ ತಲೆಕಡಿಸಿಕೊಳ್ಳಲ್ಲ. ಮೈತ್ರಿ ಮಾಡಿಕೊಂಡು ಸ್ಪರ್ಧಿಸ್ತಾರೋ? ಪ್ರತ್ಯೇಕವಾಗಿ ಸ್ಪರ್ಧಿಸುವುದಾದರೂ ಸ್ಪರ್ಧಿಸಲಿ. ಯಾವುದರ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳೋದಿಲ್ಲ. ನಾವು ಜನರ ಬಳಿ ಹೋಗ್ತಿವಿ, ಜನ ತೀರ್ಮಾನಿಸ್ತಾರೆ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್‌ ವ್ಯಂಗ್ಯ
ಮೈತ್ರಿಯಾದರೆ ಸಿದ್ದಾಂತ ಹೇಗೆ ಉಳಿಸಿಕೊಳ್ತಾರೆ..? ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ವ್ಯಂಗ್ಯವಾಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಈ ಹಿಂದೆ ಕುಮಾರಣ್ಣ ಹಾಗೂ ಅಶೋಕಣ್ಣ, ಮೈತ್ರಿ ಮಾಡಿಕೊಂಡಿದ್ರು. ಮೈತ್ರಿಯಾದರೆ ಪಕ್ಷ ಉಳಿದು ಕೊಳ್ಳುತ್ತೋ ಇಲ್ವೋ ಗೊತ್ತಿಲ್ಲ. ಮೈತ್ರಿ ಮಾತುಕತೆಗೆ ನಮ್ಮ ಯಾವುದೇ ವಿರೋಧ ಇಲ್ಲ. ಅವರ ಅನುಕೂಲಕ್ಕೆ ಏನೋ ಮಾಡಿಕೊಳ್ಳಲಿ ಬಿಡಿ. ಜೆಡಿಎಸ್ ಉಳಿಯುತ್ತೋ…ಬಿಡುತ್ತೋ ಗೊತ್ತಿಲ್ಲ. ಅವರ ಪಾರ್ಟಿ, ಶಾಸಕರು, ಮಾಜಿ ಶಾಸಕರು ಏನಾಗ್ತಾರೋ? ಎಂದು ಹೇಳಿದ್ಧಾರೆ.

ಮೈತ್ರಿ ವಿಷಯ ಅವರಿಗೆ ಬಿಟ್ಟಿದ್ದು: ಎಂ ಬಿ ಪಾಟೀಲ್‌
ಬಿಜೆಪಿ-ಜೆಡಿಎಸ್ ಮೈತ್ರಿ ವಿಷಯ ಅವರಿಗೆ ಬಿಟ್ಟಿದ್ದು. ನಾವು ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ವಿಧಾನಸಭೆಯಲ್ಲಿ ಸ್ವಂತ ಬಲದಿಂದ ನಾವು 135 ಸ್ಥಾನ ಗೆದ್ದಿದ್ದೇವೆ. ಲೋಕಸಭೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ್ರೆ ಕಾಂಗ್ರೆಸ್ ಗೆ ಅನುಕೂಲ. ಬಿಜೆಪಿಯ ಬಿ ಟೀಮ್ ಜೆಡಿಎಸ್ ಎಂಬುದು ಸಾಬೀತಾಗಿದೆ ಎಂದು ಸಚಿವ ಎಂ ಬಿ ಪಾಟೀಲ್‌ ಹೇಳಿದ್ಧಾರೆ.

ಅನುಕೂಲವಿದ್ದಾಗ ಮಾತ್ರ ಮೈತ್ರಿ: ಜಗದೀಶ್ ಶೆಟ್ಟರ್
ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ತಿದಾರೆ. ಹಿಂದೆಯೂ ಮೈತ್ರಿ ಅಂದ್ರು, ನಂತರ ಬ್ರೇಕ್ ಆಯ್ತು. ವಿಧಾನಸಭೆಯಲ್ಲಿ ಇಬ್ಬರು ಪರಸ್ಪರ ಫೈಟ್ ಮಾಡಿದ್ದರು. ಅನುಕೂಲವಿದ್ದಾಗ ಮಾತ್ರ ಇವರು ಮೈತ್ರಿ ಮಾಡಿಕೊಳ್ಳುವುದು. ಮೈತ್ರಿ ವಿಚಾರದಲ್ಲಿ ಬಿಜೆಪಿಗೆ ಯಾವಾಗಲೂ ದ್ವಂದ್ವ ನಿಲುವು ಇದೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ವೀಕ್ ಆಗಿವೆ. ಹಾಗಾಗಿ ಇಬ್ಬರಿಗೂ ಮೈತ್ರಿ ಅನಿವಾರ್ಯವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹೋರಾಡಲು ಒಗ್ಗಟ್ಟು ಮುಖ್ಯವಾಗಿತ್ತು: ಬಸವರಾಜ ಬೊಮ್ಮಾಯಿ
ಭ್ರಷ್ಟ ಸರ್ಕಾರದ ವಿರುದ್ದ ಹೋರಾಡಲು ಒಗ್ಗಟ್ಟು ಮುಖ್ಯವಾಗಿತ್ತು. ರಾಜ್ಯ ಸರ್ಕಾರ ವಿರುದ್ದ ನಾವು ಹೋರಾಟ ಮಾಡ್ತೇವೆ. ಮೈತ್ರಿ ಸ್ಥಾನಗಳ ಹಂಚಿಕೆ ಬಗ್ಗೆ ಮುಂದೆ ತೀರ್ಮಾನ ಆಗಲಿದೆ. ಈ ಕುರಿತು ನಮ್ಮ ಪಕ್ಷದ ಹೈಕಮಾಂಡ್‌ ನಾಯಕರು ನಿರ್ಧರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಸ್ವಾಗತ: ಯೋಗೇಶ್ವರ್‌
ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮಹಾಮೈತ್ರಿಯನ್ನು ಸ್ವಾಗತಿಸುತ್ತೇನೆ. ಪಕ್ಷದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button