Breaking Newsಕರ್ನಾಟಕ ರಾಜಕೀಯ

ಬಿಜೆಪಿ‌ ಜೆಡಿಎಸ್ ಮೈತ್ರಿ ವಿಚಾರ | ಮೋದಿ – ಶಾ ಮನಸ್ಸಿನಲ್ಲಿ ಏನಿದೆಯೊ ಗೊತ್ತಿಲ್ಲ: ಬಿ ಎಸ್‌ ಯಡಿಯೂರಪ್ಪ

ಬೆಂಗಳೂರು: ಬಿಜೆಪಿ- ಜೆಡಿಎಸ್‌ ಮೈತ್ರಿ ಸಂಬಂಧ ಮೋದಿ- ಶಾ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್‌ ಯಡಿಯೂರಪ್ಪ ಅವರು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿಯನ್ನು ಬಿಜೆಪಿ ಮಾಡಿಕೊಂಡೇ ಬಿಟ್ಟಿತು ಎಂಬ ಬೆಳವಣಿಗೆಗಳ ನಡುವ ಯಡಿಯೂರಪ್ಪ ಹೀಗೆ ಹೇಳಿರುವುದು ಗೊಂದಲ ಮೂಡಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಎಚ್‌ ಡಿ ದೇವೇಗೌಡರು ಭೇಟಿ ಮಾಡಿದ್ದರು ಎಂದು ಹೇಳಿದ್ದೆ. ಆದರೆ ಅದು ವಾಸ್ತವಿಕ ಸಂಗತಿ ಅಲ್ಲ ಎಂದೂ ಯಡಿಯೂರಪ್ಪ ಅವರು ಹೇಳಿರುವುದು ಮತ್ತೊಂದು ಅನುಮಾನವನ್ನು ಸೃಷ್ಟಿಸಿದೆ.

ಕರ್ನಾಟಕದಲ್ಲಿನ ಬೆಳವಣಿಗೆಗಳು ದೆಹಲಿಯಲ್ಲಿರುವ ಬಿಜೆಪಿ ನಾಯಕರ ಗಮನಕ್ಕೆ ಬಂದಿದೆಯೊ ಇಲ್ಲವೊ ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್‌ ಅನ್ನು ಯಾಮಾರಿಸಲು ರಾಜ್ಯದ ಬಿಜೆಪಿ ನಾಯಕರು ಹೀಗೆ ಹೇಳಿಕೊಳ್ಳುತ್ತಿದ್ಧಾರೊ ಗೊತ್ತಿಲ್ಲ.

ಇದೆಲ್ಲದರಿಂದ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಸಂಬಂಧ ಇನ್ನೂ ಸಾಕಷ್ಟು ನಡೆಯಲಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

Back to top button